ಹರಿಯೇ ನೀನು ನಂಬಿದವರ

ಹರಿಯೇ ನೀನು ನಂಬಿದವರ
ಕೈಯ ಬಿಡವನಲ್ಲವೆಂದು |
ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು ||
ಏನೇ ಕಷ್ಟ ಬಂದರೂನು
ನಿನ್ನ ನೆನೆದು ನೀಗಿ ಬಿಡುವೆನು||

ಮತ್ತೆ ಮತ್ತೆ ಬಿಡದೆ ನನ್ನಪಾಪ
ಬೆನ್ನ ಹತ್ತಿಬಂದರೂನು ನಿನ್ನ ಜಪಿಸಿ|
ಎಲ್ಲ ಕರ್ಮವನು ಕಳೆಯುವವರೆಗೂ
ನಿನ್ನ ಸ್ತುತಿಸಿ ಮುಂದೆ ಸಾಗುವೆ|
ನಿನ್ನ ಕೃಪೆಯು ಎನ್ನ
ರಕ್ಷಣೆ ಮಾಡಿತೆಂದುಕೊಳ್ಳುವೆ||

ಕರ್ಮಫಲವು ನೀಡಿದೆಲ್ಲವನ್ನೂ
ಮಹಾ ಭಾಗ್ಯವೆಂದುಕೊಳ್ಳುವೆ|
ಯಾವ ಪಿತೃವನು ದೂಷಿಸದೆ
ಕಾಲ ಕರ್ಮವನು ಮಾಡುತಾ
ನಿನ್ನ ಭಜನೆ ಮಾಡುವೆ|
ಬಂದದ್ದನ್ನೆಲ್ಲಾ ಸಹಿಸಿ
ಮುಂದೆ ದಾರಿ ಮಾಡಿಕೊಳ್ಳುವೆ||

ಮಂದಮತಿಯಾದ ಎನ್ನ ಕ್ಷಮಿಸಿ
ತಿದ್ದಿರೂಪಿಸು ಹರಿಯೇ|
ಜನ್ಮ ಜನ್ಮಾಂತರಕೂ ನಿನ್ನನೇ ನೆನೆಯುವೆ
ನಿನಗೆ ನನ್ನ ಅನಂತ ಅನಂತ
ವಂದನೆಯ ಅರ್ಪಿಸುವೆ
ಸ್ವೀಕರಿಸು ಓ ಎನ್ನ ದೊರೆಯೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್
Next post ಸಾವು-ನೋವು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…