K Sharifa

ಅವಕಾಶ ಕೊಡಿ

ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ […]

ತಿರಂಗಾ ಧ್ವಜ

ಬೇಲಿಯೇ ಇಲ್ಲದ ಸೂರ್ಯ ಮುಳುಗದ ದೇಶ ವೀರ ಜನತೆಯ ರಕ್ತ ಕೆಂಪಾದ ಜಲಿಯನ್‌ವಾಲಾ, ಆ ರಕ್ತದ ಮೇಲೆ ಬೆಳೆದ ಹಸಿರು ಮರದ ಟೊಂಗೆ ಟೊಂಗೆಯಲಿ ತಿರಂಗಾಧ್ವಜ ನೆಟ್ಟು […]

ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. […]

ಚೋಮನ ದುಡಿಮೆ

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. […]

ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ ಬೆಳೆಯುತ್ತಿರುವ ನೋವುಗಳು, ಗೋಜಲುಗೋಜಲಾಗಿ ಸ್ಪಷ್ಟತೆಯಿಲ್ಲದೆ ತಡಕಾಡುವ ಸಾವಿರಾರು ಸಮಸ್ಯೆಗಳು, ಜರ್ಜರಿತವಾಗಿ ಹತಾಶವಾಗಿರುವ ಸುಂದರ ಕನಸುಗಳು, ಅರಳಿ ಘಮಘಮಿಸಿ ನಳನಳಿಸಲಾಗದೇ ಬತ್ತಿ ಹೋಗುತ್ತಿರುವ ಮೊಗ್ಗು ಮಲ್ಲಿಗೆಗಳು, […]

ತಂಗಾಳಿ

ಆಗಸದಷ್ಟು ವಿಶಾಲ ಹೆಣ್ಣುಗಳ ಹೃದಯಾಂತರದ ನೋವಿನ ಹರವು ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ ಬಂಧಿನಿ – ಕಣ್ಣಿದ್ದು ಮೈತುಂಬಾ ಎಚ್ಚರವಹಿಸಿ – ಶೋಧಿಸಿ – ಪರೀಕ್ಷಿಸಿ ಒಂದೊಂದೇ ಹೆಜ್ಜೆ […]

ಜನರ ಹತ್ತಿರ ಬನ್ನಿ

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ, […]

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ […]