Home / ಪದ್ಯ

Browsing Tag: ಪದ್ಯ

ಹಿಂಬಾಲಿಸಿ ಅತ್ತ, ಇತ್ತ ನೀ ತಿರುಗಿದತ್ತ, ಹೊರಳಿದತ್ತ, ಹರಿದತ್ತ ಆಸೆಬುರುಕ ಕಣ್ಣಲ್ಲಿ ಹತ್ತು ಹಲವು ಕೋನಗಳಲ್ಲಿ ಚಿತ್ರ ಎತ್ತಿಕೊಳ್ಳುತ್ತ ಸಂಧಿಗಾಗಿ ಹೊಂಚುತ್ತ ಬರ ಸೆಳೆಯೆ ಹುನ್ನಾರ ಹೂಡುತ್ತ ನೆವ ಸವದಲ್ಲಿ ತಾಕುತ್ತ ಅಲ್ಲಿ ಇಲ್ಲಿ ಮುಟ್ಟುತ್ತ...

ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ ಮರ್ಮರವೆ ಗಾಳಿಯ ಭಾಷೆಯಂತ...

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ! ಎತ್ತಿದ್ದ ಸಾಲ...

ಪ್ರೀತಿ ದ್ವೇಷದ ರಹಸ್ಯಗಳು ಆತ್ಮವನ್ನು ಕುಟುಕಿದ ನಿಗೂಢಗಳು ಪಾತಾಳಕ್ಕೆ ಕುಸಿಯುವ ಕನಸುಗಳು ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ ಪಾಪ ತುಂಬಿದ ಆತ್ಮಗಳು ಅಲೆಮಾರಿ ಮೋಡಗಳು ಪಾಪಾತ್ಮಗಳನ್ನು ತೊಳೆಯಲು ಮಳೆಯನ್ನು ತರಲಿಲ್ಲ ಕಲಬೆರಿಕೆ ಕನಸುಗಳು ಭೂಮ...

ಅಬ್ಬೆಪಾರಿಗಳು ಮನೆವಾಳ್ತನಕಿರಬಾರದು ಕೈ ಹಿಡಿದವಳು ಸೇರಿದಂತೆ ಎಲ್ಲರಿಗೂ ಸದರ ಮನೆ ಅಳಿಯ ಅತ್ತ ಮಗನೂ ಅಲ್ಲದ ಇತ್ತ ನೆಂಟನೂ ಅಲ್ಲದ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಲಾಜು ಬದುಕಿನ ವ್ಯಕ್ತಿ ಸರಿಕಂಡದ್ದ ಮಾಡುವ ಹಾಗಿರಲ್ಲ ಸ್ವತಂತ್ರವಾಗಿ ನಡೆಯೋ ಹಾ...

ಬಜಾರಿನಲ್ಲಿ ಇದ್ದ ಬುದ್ಧ ರಾಮ, ಕೃಷ್ಣ, ಶಿವ, ಗಾಂಧಿ ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ. ಮೊಂಡು ಕೈ, ಹರಿದ ಅಂಗವಸ್ತ್ರ…. ಬುದ್ಧ ಹೌದೋ ಅಲ್ಲವೋ ಎಂದು ಅನುಮಾನಿಸುವಷ್ಟು ಚಿಂದಿಯಾಗಿದ್ದ. ಆದರವೇ ಜಾಜ್ವಲ್ಯಮಾನ ಕಣ್ಣುಗಳು ಸೆಳೆದವು, ಹೊ...

ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)...

ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ ನಿಲ್ಲಲು ಆತ್ಮವಿಶ್ವ...

ಇಲ್ಲವೆಂದರೂ ಇಲ್ಲವಾಗುವುದೇ? ನೆನಪು- ಹುಲ್ಲು ಗರಿಕೆಯಂತೆ ಹಸಿರಾಗಿದೆ. ಆ ಚಿತ್ರ ಅವನದೇ ಮಳೆಬಿಲ್ಲಿನಂತೆ ಭರತ ಖಂಡದ ಮೇಲೆ ಬಾಗಿದೆ ತಂಗಾಳಿ ಅದನು ತೂಗಿದೆ. ಕಣೋಳಗಿನ ಮಿಂಚು ಭೂಮಂಡಲವ ಬೆಳಗಿದೆ ನಿಸ್ವಾರ್ಥ ನಗೆ ಮೂಲೆ ಮೂಲೆಯನೂ ತಾಕಿದೆ ಸರಕು ಸಂ...

ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ ಕುತ್ತಿಗೆಗೆ ಬರುವುದು ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು ನಿತ್...

1...89101112...26

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....