ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ಕಂಡಿದನ್ನು ಜನತೆಗೆ ತಿಳಿಸುವನು
ನಿನ್ನ ಪ್ರತಿಭೆ ಹೆಮ್ಮರವಾದದ್ದು
ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು.

ಯಾವುದೇ ಅಸ್ತ್ರವಿಲ್ಲದೆ
ವೀರನಂತೆ ಹೋರಾಡುವಿ
ತನ್ನ ಅಸ್ತ್ರವೇ ಒಂದು ಹಾಳೆ
ನಿನ್ನ ಖಡ್ಗವೇ ನಿನ್ನ ಲೇಖನಿ.

ಹಗಲು ರಾತ್ರಿ ನಿದ್ರೆಗೆಟ್ಟು
ಸಮಾಜ ಸುಧಾರಣೆ ಮಾಡುವಿ
ಭೃಷ್ಟರನ್ನು ಕಂಡು ಮರುದಿನ
ಪತ್ರಿಕೆಯಲ್ಲಿ ಸ್ಫೋಟಿಸುವಿ.

ಭೃಷ್ಟರಿಗೆ ಸಿಂಹ ಸ್ವಪ್ನವಾದಿ
ಶಿಷ್ಟರ ಮಾರ್ಗ ನೀಡುವಲ್ಲಿ ನೀ ಸಫಲನಾದಿ
ಜನತೆ ಸಮಸ್ಯೆಯನ್ನರಿತು ನಿವಾರಿಸುವಲ್ಲಿ
ಸರ್ಕಾರಕ್ಕೆ ಸೇತುವೆವಾಗಿ ಎಚ್ಚರಿಕೆ ನೀಡುವಿ.

ಪತ್ರಿಕೆಯ ಮಹತ್ವ ಅರಿತು
ಪತ್ರಿಕೆಯ ಸೇವೆ ಎಡೆಬಿಡದೆ ಮಾಡುವಿ
ಕಾನೂನ ಚೌಕಟಿನಲ್ಲಿಯೇ ಕಾರ್ಯಮಾಡಿ
ಜನ ಸೇವೆಯೇ ಈಶ್ವರ ಸೇವೆ ನೀ ಮಾಡುವಿ.

ಜನತೆಯ ಸಂಪರ್ಕ ನೀ ಚನ್ನಾಗಿರಿಸಿಕೊಂಡಿದಿ
ನೀನ್ನನು ಎದುರಿಸುವರಿಗೆ ಎದೆತಟ್ಟಿ ನಿಲ್ಲುವಿ
ಪತ್ರಿಕೆಗೆ ಧಕೆಯಾಗದಂತೆ ನೋಡುವಿ ನೀನ ಸೇವೆ ಅವರ.
*****