ಜೋಕಾಲಿ ಆಡೋಣ ಬರ್ರೆ

ಜೋಕಾಲಿ ಆಡೋಣ ಬರ್ರೆ
ಬೇಕಾದ ನಾರಿಯರೆಲ್ಲ
ಸಾಕಾಗುವತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||ಪ||

ಖೊಬ್ಬರಿ ತಂಬಿಟ್ಟು
ಇಬ್ಬರು ಉಡಿಯೊಳು ಕಟ್ಟಿ
ಹಬ್ಬಕೊಮ್ಮೆ ಹಾಲ ಹೊಯ್ಯೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೧||

ಏಕ ನಿಷ್ಠೆಯಿಂದ
ಎಡಬಲ ಹಗ್ಗವ ಪಿಡಿದು
ನೆಟ್ಟಗ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೨||

ತುತ್ತನ್ನ ತುದಿಯಮ್ಯಾಲೆ
ಕಟ್ಟೇತ್ರಿ ಜೋಕಾಲಿ
ನಟ್ಟನಡುವೆ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೩||

ಹೊಸಧಿಯೊಳಗ ನಮ್ಮ
ಶಿಶುನಾಳಧೀಶನ
ಅಂತಃಕರಣವಿದ್ದ ಗುರುವಿನ ಕೂಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೪||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ವಜ
Next post ಶ್ರೀಮಂತ ಬಡವರು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…