ನಮ್ಮ ಮನೆಯ ಮುಂದಿನ
ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ
ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ
ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು
ಚಪ್ಪನ್ ಚೂರಾಯಿತು. ಪಾಪ ಅದು
ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು
ಬೀದಿಯಲ್ಲಿ
ಚಲ್ಲಾಪಿಲ್ಲಿಯಾಗಿ ಬಿದ್ದು ನಕ್ಷತ್ರಗಳಾಗಿ ಬಿಟ್ಟವು.
*****