ಬಂದ ಬಂದಾ ವೀರಭದ್ರಾ
ಛಿದ್ರ ಛಿದ್ರಾ ಛಾವಣಾ
ಭೂಮಿ ನಡುಗಿತು ಕಡಲು ಕಡೆಯಿತು
ಬಿದ್ದ ಬಿದ್ದಾ ರಾವಣಾ ॥೧॥
ಜೀವ ಪೀಠಕೆ ಲಿಂಗ ಇಳೆಯಿತು
ಬೆತ್ತ ಬೀಸಿದ ಗುರುವರಾ
ಆದಿ ಮೌನಕೆ ಮಹಾ ಮೌನಕೆ
ಪಂಚ ಪೀಠವ ಬೆಳಗಿದಾ ॥ ೨ ॥
ಮೋಡ ತಡಸಲು ಗುಡುಗು ಧಡಕಲು
ಗುಡ್ಡ ಬೆಟ್ಟಕೆ ತೂರಿದಾ
ಹಸಿರು ತೂರಿದ ಹಕ್ಕಿ ತೂರಿದ
ಲಿಂಗ ಧರ್ಮವ ಸಾರಿದಾ ।। ೩ ।।
ಪಂಚಪೀಠಕೆ ಪಂಚ ಶಿಖರಕೆ
ಗಾನ ಗಂಟೆಯು ಮೊಳಗಿತು
ಒಡಲ ಈಚೆಗೆ ಕಡಲ ಆಚೆಗೆ
ದೀಪ ಗೋಪುರ ಬೆಳಗಿತು ।। ೪ ।।
*****



















