ಕಂಡೆ! ನಿನ್ನನು ಮೊದಲಿಗೊಮ್ಮೆ ಕಂಡೆ!
ಓ! ಸನಾತನ ಸಮುದ್ರರಾಜ!
ಸಂಕ್ರಾಂತಿ ಪುರುಷ! ಓ!
ಹಳೆಯದನೆಲ್ಲ ಒಳಗೊಳಗೆ ಕಾಯ್ದು
ಹೊಸದನೆಲ್ಲ ಹೊರಗೆ ಸೂರೆಗೆಯ್ದು
ಚಿರಸನಾತನವಾಗಿ
ಪುನರ್ನವವಾಗಿ
ಸಲಿಲ ಲೀಲೆಯಲಿರುವ ಚೈತನ್ಯವೆ!
ಸುಮನೋಹರ ಮೂರ್ತಿ!
ಕಂಡೆ!
ನಿನ್ನನು ಮೊದಲಿಗೊಮ್ಮೆ ಕಂಡೆ!
*****
ಕಂಡೆ! ನಿನ್ನನು ಮೊದಲಿಗೊಮ್ಮೆ ಕಂಡೆ!
ಓ! ಸನಾತನ ಸಮುದ್ರರಾಜ!
ಸಂಕ್ರಾಂತಿ ಪುರುಷ! ಓ!
ಹಳೆಯದನೆಲ್ಲ ಒಳಗೊಳಗೆ ಕಾಯ್ದು
ಹೊಸದನೆಲ್ಲ ಹೊರಗೆ ಸೂರೆಗೆಯ್ದು
ಚಿರಸನಾತನವಾಗಿ
ಪುನರ್ನವವಾಗಿ
ಸಲಿಲ ಲೀಲೆಯಲಿರುವ ಚೈತನ್ಯವೆ!
ಸುಮನೋಹರ ಮೂರ್ತಿ!
ಕಂಡೆ!
ನಿನ್ನನು ಮೊದಲಿಗೊಮ್ಮೆ ಕಂಡೆ!
*****