ನೋಡು ನೋಡು ನೋಡು ಲಿಂಗವೆ
ನಿಲ್ಲು ನಿಲ್ಲು ಮೆಲ್ಲಗೆ
ನೆಲ್ಲಿ ನೀರಲ ಮಾವು ಪೇರಲ
ನೀನೆ ಮಮತೆಯ ಮಲ್ಲಿಗೆ
ಗಾಳಿಗುಂಟ ಗಾನ ಹಣೆದನು
ಮೇಲೆ ಸಂಪಿಗೆ ಸುರಿದೆನು
ಬಕುಲ ಜಾಜಿ ಕಮಲ ಕೇದಿಗೆ
ನಿನ್ನ ಮೇಲೆ ಎರೆದೆನು
ಅಪ್ಪಿ ತಪ್ಪಿ ತಪ್ಪು ಮಾಡೆನು
ಕಡಲ ಗಿಣಿಯನು ಕೂಡೆನು
ಒಮ್ಮೆ ಕೂಡಿ ಜೋಡಿ ಒಡೆಯೆನು
ಮತ್ತೆ ಓಡಿ ಹೋಗೆನು
ನಿನಗೆ ನಾನು ನನಗೆ ನೀನು
ಗುರುವೆ ಸತ್ಯದ ಸಾಕ್ಷಿಯು
ಮೌನದಾಚೆಗೆ ಮಹಾಮೌನಕೆ
ಗುರುವು ಅರುಹಿನ ಅಕ್ಷಿಯು
*****



















