ಓ ನನ್ನ ನಲ್ಲೆ
ನಿನ್ನ ನೆನಪು ನನ್ನಲ್ಲೆ
ಕಳೆದುಹೋಗಿದೆ ನನ್ನ ಮನಸ್ಸು ನಿನ್ನಲ್ಲೆ
ಓ ಪ್ರಿಯೆ,ನೀ ಎದುರಿಗೆ ಬಂದರೆ
ಏರುತಿದೆ ಹೃದಯದ ಬಡಿತ
ಅರಿವಾಗದೆ ನಿನಗೆ ಓ ಚೆಲುವೆ
ಈ ನನ್ನ ಮನಸ್ಸಿನ ತುಡಿತ
ನಿನ್ನ ಕಣ್ಣಿನ ಹೊಳಪು ಚಂದ್ರನ
ಕಾಂತಿಗಿಂತಲೂ ಎಷ್ಟೋ ಪಟ್ಟು ಹೆಚ್ಚು
ನಿನ್ನ ಮುದ್ದು ಮುಖವನ್ನು ಕಂಡು
ನನ್ನ ಮನಸ್ಸಿಗೆ ಹಿಡಿದಿದೆ ಹುಚ್ಚು
ನನ್ನ ಮನಸ್ಸಲ್ಲಿ ನಿನ್ನದೇ ಯೋಚನೆ
ನೀ ಹೀಗೆ ನೀಡಬೇಡ ಯಾತನೆ
ನಿನ್ನ ಕುರಿತ ಎಲ್ಲಾ ಕಲ್ಪನೆ
ನಿನಗೇನೆ ಅರ್ಪಣೆ.
*****

















