ಭಾವ ತುಂಬಿತು ಕಣ್ಣು ತುಂಬಿತು
ಬಾಳು ಬೆಳಗಿತು
ಈ ಜೀವನ ಸಾರ್ಥಕವಾಯಿತು
ಗೋವಿಂದನ ದರುಶನವಾಯಿತು
ಮೋಹಕ್ಷಯವಾಗಿ ಮೋಕ್ಷವಾಯಿತು
ಕುಕರ್ಮವೆಲ್ಲ ಪರೋಕ್ಷವಾಯಿತು
ಇಹ ಸುಖ ಹಂಬಲವು
ಕ್ಷಣದಲಿ ಮನದಿಂದ ದೂರವಾಯಿತು
ವಿಶಾಲ ಆಕಾಶದಲಿ ಮನ ಕಂಗಿತು
ಮನದ ಮೂಲೆ ಮೂಲೆಯು
ತಾನೆ ತಿಳಿಗೊಂಡಿತು
ಮನದ ಕಪ್ಪು ಚುಕ್ಕೆ ಕರಗಿತು
ಆಸೆಗಳಿಗೆ ಸಂಕೋಲೆ ಬಿದ್ದವು
ಕನಸುಗಳು ಬಂಧಿಯಾದವು
ಗೊಲ್ಲಯಾದವನ ನೆನಪಲಿ
ಚಿತ್ತ ಪುನಿತಗೊಂಡಿತು
ಇನ್ನೇನುಬೇಡ ಮತ್ತೇನು ಬೇಡ
ದೇವನಾಮ ಸ್ಮರಣೆ ತೊರೆದು
ಇನ್ನೊಂದು ನಾ ಹಾಡೆ
ಮಾಣಿಕ್ಯ ವಿಠಲನ ಪದ ಹಾಡುವೆ
*****















