ನಾದ ವೇದಗಳ ಶಿವೆ

ನಾದ ವೇದಗಳ ಶಿವೆ
ಭರತ ಮಾತೆಯ ಓಂಕಾರಗೀತೆಯ
ಶಿರೋಮಣಿಗಳ ಮಾತೆಯೆ
ನಿನಗೆ ವಂದನೆ ಶಿವೆ ||

ಆನಂದದನುರಾಗದ ಪದ್ಮಮುಕುಟ
ಶೋಭೆಯೆ ಸುರನರಸೇವಿತೆ
ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ
ನಿನಗೆ ವಂದನೆ ಶಿವೆ ||

ವನಸ್ಪತಿಯ ವೈಭವದ ತಾಣವೆ
ಸುಂದರ ಗಾನ ವಿನೋದವಾಣಿಯೆ
ಸಾಹಿತ್ಯ ಸಂಗೀತ ಸೌಂದರ್‍ಯೋಪಾಸಕಿ
ನಿನಗೆ ವಂದನೆ ಶಿವೆ||

ವೀರ ಧೀರಶಿರೋಮಣಿಗಳ ಜಾತೆಯೇ
ಕೋಟಿ ಸೂರ್‍ಯ ತೇಜೋನ್ಮಣಿಯೆ
ಅಮಿತ ಸುರನರ ಪೂಜಿತೆ
ನಿನಗೆ ವಂದನೆ ಶಿವೆ ||

ವೈಭವದಿ ಮೆರೆದ ಕೃಷ್ಣೆ ನೀನು
ಗಂಗಾ ಯಮುನೆ ಗೋದಾವರಿಯೆ
ಸರಸ್ವತಿ ಸಿಂಧು ಗಂಗೆ ತುಂಗೆ ಭದ್ರೆಯೆ
ಜಲ ತರಂಗಿಣಿ ಜೋತಿ ಸ್ವರೂಪಿಣಿ
ನಿನಗೆ ವಂದನೆ ಶಿವೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಕೂಲು ಮಕ್ಕಳ ನಡುವೆ
Next post ಹತ್ಯೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…