ಕಸದ ಡಬ್ಬಿ

ಬಂದವರೆಲ್ಲರೂ ಹೋಗಿಬಿಡುವ ಬಸ್‍ಸ್ಟಾಂಡಲ್ಲಿ
ಉಪಯೋಗಿಸಿ ಎಂದು ಕೂತ ಕಸದಡಬ್ಬಿಗೆ
ದಿಕ್ಕಿಲ್ಲ ; ದೆಸೆಯಿಲ್ಲ
ಪೀಯೂಸಿಯ ಆ ಚಿಕ್ಕ ಹುಡುಗನಿಗೆ
ಅವನ ಕಳೆದು ಹೋದ ಬಸ್‍ಪಾಸು ಸಿಕ್ಕಲಿಲ್ಲ
ಸ್ಟಾಂಡಿನಾಚೆಯ ಚಪ್ಪಲಿ ಹೊಲಿಯುವ ಹುಲಸ್ಟಾರನಿಗೆ
ಗಿರಾಕಿ ಇಲ್ಲ

ಹುಡುಗನ ಚಪ್ಪಲಿ ಹುಸಿದರೆ
ಚಮಗಾರನಿಗೊಬ್ಬ ಗಿರಾಕಿ ಸಿಕ್ಕಬಹುದು
ಹುಡುಗ ಹುಡುಕಾಡಿದರೆ
ಯಾರಿಗೆ ಗೊತ್ತು ?
ಕಸದ ಡಬ್ಬಿಯಲ್ಲೇ ಪಾಸು ಸಿಕ್ಕಬಹುದು
ಆದರಿಂದ
ಕಸದಡಬ್ಬಿಗೂ ಗೆಳೆಯ ದೊರಕಬಹುದು

ಇದೆಲ್ಲಾ ನಮ್ಮ ನಿಮ್ಮ ಆಸೆ
ಕಸದಡಬ್ಬಿ ನಿರ್ಮಿಸಿದವನ ಆಶಯ
ಬೇರೆ ಇರಬಹುದು
*****

 

ಕೀಲಿಕರಣ : ಎಮ್.ಎನ್.ಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೨
Next post ರಷೀದ-ಚಂಪಾ ಬೆಂಕಿಯಲ್ಲಿ ಅರಳಿದ ಹೂಗಳು

ಸಣ್ಣ ಕತೆ