ಬೆಳಗು ಬೆಳಗಲಿ ಹೂವು ಅರಳಲಿ
ಆತ್ಮ ಪಕ್ಷಿಯು ಹಾರಲಿ
ಸತ್ಯ ಗಾಳಿ ಬೀಸಲಿ
ವಿಶ್ವ ಗಾನವ ಹಾಡಲಿ

ಜಡವು ಜಾರಲಿ ಹಗುರವಾಗಲಿ
ಬೆಳಕು ಮಾತ್ರವೆ ಉಳಿಯಲಿ
ಮಿಂಚು ಮಿನುಗಲಿ ಶಕ್ತಿ ಸುರಿಯಲಿ
ಯುಗದ ಬಾಗಿಲು ತೆರೆಯಲಿ

ಪ್ರಾಣ ಸಖಿಯಲಿ ವಿಶ್ವ ಸಖನಾ
ಪ್ರೇಮ ಮಿಲನವು ದೊರೆಯಲಿ
ಕಲ್ಪವೃಕ್ಷದ ಕವನ ಕೇಳಲಿ
ವಿಶ್ವ ಚಕ್ರವು ತಿರುಗಲಿ

ಸತ್ಯಯುಗದಾ ತೇರು ಎಳೆಯಲಿ
ಮುಕ್ತಿಧಾಮವು ತೆರೆಯಲಿ
ಪ್ರೇಮ ಸಾಗರ ಶಿವನ ಚಿತ್ರವು
ಭುವನ ಪತ್ರದಿ ಬರೆಯಲಿ
*****