ಬಾಹುಬಲಿ ಕರುನಾಡ ಕಲಿ
ಶೌರ್ಯ ಪರಾಕ್ರಮದ ಹುಲಿ
ಭರತನ ಪರಾಜಯಿಸಿದ ವೀರಾಗ್ರಣಿ
ಭಾರತ ಮಣ್ಣಲಿ ನಿಂತ ಹೊನ್ನಿನ ಗಣಿ
ಸೌಂದರ್ಯ ಔನತ್ಯಗಳ ಮಕುಟಮಣಿ
ವೀರ ರಣಾಂಗಣದೆ ಸೋದರನ ಸೋಲಿಸಿ
ಆಸೆ ಆಕಾಂಕ್ಷೆಗಳೆಲ್ಲವನು ಕಡೆಗಣಿಸಿ
ನಿಂತಿರುವೆ ಯೋಗಿಯಾಗಿ ತ್ಯಾಗಿಯಾಗಿ
ಸತ್ಯ ಅಹಿಂಸಾ ಧರ್ಮದ ಪ್ರತಿಬಿಂಬವಾಗಿ
ಕುಬ್ಬ ಮಾನವರೆದುರು ಎತ್ತರೆತ್ತರ
ಅಭಿಮಾನದಲಿ ಬೆಳೆದ ಮುಗಿಲೆತ್ತರ
ಕಣ್ಣಿಗೆಟುಕದ ಶ್ರೀಮಂತ ಧೀಮಂತ ಮೂರುತಿ
ಜಗವಳಿದರೂ ಉಳಿವುದು ನಿನ್ನ ಕೀರುತಿ
*****