ಭಾರತಾಂಬೆಯ ಮಕ್ಕಳು

ಭಾರತಾಂಬೆಯ ಮಕ್ಕಳು ನಾವು
ಹೆಮ್ಮೆಯ ಭಾರತೀಯರು ನಾವು

ಸುಂದರ ವನಗಳ ಪುಷ್ಪಗಳು ನಾವು |
ಮಾತೆಯ ಪಾದಕೆ ಅರ್ಪಿತವು || ಭಾ ||

ಭಾವೈಕ್ಯದಲಿ ಒಂದಾಗುವೆವು
ಒಂದೇ ಮತ ಎನ್ನುವೆವು
ನಮ್ಮದು ಒಂದೇ ಮತ ಎನ್ನುವೆವು || ಭಾ ||

ದಿಗ್ ದಿಗಂತವನೇರಿ ಶಿಖರದಿ
ವಿಜಯ ಕಹಳೆಯ ಮೊಳಗುವೆವು
ನಾವು ವಿಜಯ ಕಹಳೆಯ ಮೊಳಗುವೆವು || ಭಾ ||

ಅನಂತ ಅನಂತ ರೂಪದಿ
ಮಾತೆಯ ಹರುಷದಿ ಹಾಡುವೆವು
ಮಾತೆಯ ಹರುಷದಿ ನಲಿಯುವೆವು || ಭಾ ||

ಕೋಟಿ ಕಷ್ಟಗಳೆ ಬರಲಿ ತಾಯಿ
ಮೆಟ್ಟಿ ನಿಂದು ದಿಟ್ಟತನದಿ ಎದುರಿಸುವೆವು
ತಾಯೆ ನಾವು ಎದುರಿಸುವೆವು || ಭಾ ||

ನಿತ್ಯವು ನಿನ್ನನು ಮನದಿ ಜಪಿಸಿ
ತಾಯೆ ನಿನಗೆ ನಮಿಸುವೆವು || ಭಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್‍ಗಿಲ್ ಹಾಡು
Next post ಅಲ್ಲಮನೆಂದರೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…