ಕವಿದ ಮೋಡ ಕಪ್ಪಾದರೇನು
ಭಾವನೆಗಳು ಬರಡಾಗವು
ಮೋಡಗಳ ಮರೆಯಲ್ಲಿ
ಜೀವನವಿಹುದು ಅಪಾರ ||

ತಿಳಿಯಾದ ಗಾಳಿ ಬೀಸಲು
ಬಿಳುಪಾಗದೆ ಮೋಡ
ಕಾರಿಮೋಡ ಸರಿದು
ಬಾರದಿರನೇ ಚಂದಿರ ||

ಕಷ್ಟಗಳು ಕಳೆದು
ಸುಖಶಾಂತಿ ಬಾರದೇನು
ಯಾರಿಗೂ ಯಾರಿಲ್ಲಾ
ನಿನ್ನ ಬಾಳಿದು ನಿನ್ನದೂ ||

ಧರೆಯು ಹಸಿರಾದರೇನು
ಹೊಸನೀರು ಹರಿದರೇನು
ಕಾಣುವುದೇ ಹುಟ್ಟು
ತಿಳಿದವನೇ ಬಲ್ಲಾ ||

ಮಣ್ಣಿನೊಳಗಿನ ಬೇರು
ಸಸಿಯಾಗಿ ಮರ ಬೆಳೆದು
ಅರಿತು ಅದರಂತೆ ನೀ ಬಾಳು
ಜೀವನ ಸತ್ಯ ನಿತ್ಯ ||
*****