ಗೆಳತಿ, ನೀನಲ್ಲಿ ನಾನಿಲ್ಲಿ

ಗೆಳತಿ,
ನೀನಲ್ಲಿ ನಾನಿಲ್ಲಿ
ಆದರೂ ಇಲ್ಲ ವಿರಹ
ಇದು ಸತ್ಯ ಬರಹ //ಪ//

ಓದುವ ಕವಿತೆಯಲಿ ನೀ ಕವಿತೆಯಾಗಿರುವೆ
ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ
ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ
ಕತ್ತಲೆ ಬಂದರೂ ಅಲ್ಲಿ ನೀ ಸ್ಪಷ್ಟ ಕಾಣುವೆ
ಹಾಗಾಗಿಯೆ ವಿರಹ. . . ನನಗಿದೆಯೆ ನೀ ಹೇಳು
ಇದ್ದರೂ ಅದು ಹಿತವೆ. . . ನೀ ಯಾರಿಗಾದರೂ ಕೇಳು!

ಮದ್ಯದ ಬಟ್ಟಲಲಿ ನೀ ಅಡಗಿ ಕುಳಿತಿರುವೆ
ಅದು ಒಳ ಹೋದಂತೆ ನೀ ಒಳಗೆ ತೂರುವೆ
ಅನಂತರ ನೀನೇನೆ ನನ್ನೆಲ್ಲ ಮಾತು
ಇರುವ ಜಗತ್ತು ಕೂಡ ಇದಕ್ಕೆ ಹೊರತು
ಅದಕಾಗಿ ಈ ಅನುಭಾವ ಪ್ರೇಮಾನುಭಾವ
ಆಗಬೇಕು ಈ ದ್ವೈತ ಅದ್ವೈತನುಭಾವ
*****

ಕೀಲಿಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿದ ಮೋಡ ಕಪ್ಪಾದರೇನು
Next post ಭಾಷೆಯೂ ಲೋಕಸೌಂದರ್ಯವೂ

ಸಣ್ಣ ಕತೆ