ಏನೇ ಬಂದರೂ

ಏನೇ ಬಂದರೂ
ಎದುರುಸಿ ಸಾಗುವ
ಆತ್ಮವಿಶ್ವಾಸವ ನೀಡೆನಗೆ ದೇವಾ|
ಕರುಣಿಸಿ ನಿನ್ನ ಕರುಣೆಯ
ಕವಚವ ಸದಾ ಕಾಯೆನ್ನ ಜೀವ||

ಹಸಿದ ಹೆಬ್ಬುಲಿ ಗರ್ಜಿಸಿದಂತೆ
ಗರ್ಜಿಸಲಿ ಬಾಳ ಕೆಡುಕು|
ಕಡಲುಬ್ಬರಿಸಿ ಅಬ್ಬರಿಸುವಂತೆ
ಅಬ್ಬರಿಸಲಿ ಬದುಕು|
ಕಾರ್ಮೋಡ ಕವಿದು ಮಿಂಚು,
ಗುಡುಗು, ಬರಸಿಡಿಲುಗಳು
ಆರ್ಭಟಿಸುವಂತೆ ಆರ್ಭಟಿಸಲಿ ಜೀವನ|
ನಿನ್ನೊಂದು ಕರುಣೆಯ ಕಿರಣ
ಆಶಾಕಿರಣವಾಗಿರಲು ಭಯಪಡೆನು ನಾನು||

ಸಾವಿಗೆದರದೆ, ಅಧರ್ಮಕ್ಕಂಜದೆ,
ಕಪಟ ಮೋಸಗಳಿಗೆ ಎದೆಗುಂದದೆ
ಹೋರಾಡುವುದ ಕಲಿಸೆನಗೆ|
ಅನ್ಯಾಯಿಗಳ ನಿರ್ದಯದೆ
ಹುಟ್ಟಡಗಿಸೆ ಶಕ್ತಿ ನೀಡೆನಗೆ|
ಗುರಿ ಇರಿಸು, ಅದ ನೆರವೇರಿಸೆ
ಹುರಿದುಂಬಿಸು, ಆಶೀರ್ವದಿಸು
ಜಯದ ಹಿಂದೆ ಜಯಗೊಳಿಸು
ನೀ ಸದಾ ಇಲ್ಲಿ ವಿಜೃಂಭಿಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರೀಕ್ಷಲ್ಲೊಂದು ನಗರ
Next post ಭೂಕಂಪದ ಬದುಕು

ಸಣ್ಣ ಕತೆ

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…