ಅಂತರೀಕ್ಷಲ್ಲೊಂದು ನಗರ

ಅಂತರೀಕ್ಷಲ್ಲೊಂದು ನಗರ

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ ಬೆಳಕನ್ನು ಪ್ರತಿಫಲಿಸುವ ಕನ್ನಡಿಗಳು ಪ್ರಾಕೃತಿಕ ಬೆಳಕನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಎರಡು ಗಾಜಿನ ಪದರುಗಳಿಂದಾವೃತ್ತವಾದ ಈ ನಗರ ಸಂಕೀರ್ಣದಲ್ಲಿ ಹೊರಪದರವು ಪರಿಸರದ ಮಾಲಿನ್ಯ, ಶಬ್ಧ ಮಾಲಿನ್ಯವನ್ನು ತಡೆಯುತ್ತದೆ. ಒಳಪದರ ಗಾಜಿನ ಪದರವನ್ನು ಗಾಳಿ ಒಳಬರಲು ಅನುಕೂಲಕ್ಕೆ ತೆರೆಯುವ ಕಿಟಕಿಯಂತೆ ಬಳಸಬಹುದು. ಸೂರ್ಯನ ತಾಪ, ಗಾಳಿಯ ಚಲನೆಯನ್ನು ಈ ನಗರದಲ್ಲಿ ಕಾಯ್ದುಕೊಳುತ್ತದೆ. ಹೆಚ್ಚು ಬಿಸಿಗಾಳಿಯನ್ನು ನಗರದ ಮೇಲಿನ ಮುಚ್ಚಳದಿಂದ ಹೊರಹಾಕಲು ಸಾಧ್ಯವಿದೆ. ಚಳಿಗಾಲದಲ್ಲಿ ಗಾಳಿಯ ಉಷ್ಣತೆಯನ್ನು ಬಳಸಿ ನಗರವನ್ನು ಬೆಚ್ಚಗಿಡಬಹುದು.

ನೆಲಮಟ್ಟದಲ್ಲಿ ಸಾಂದ್ರವಾಗಿರುವ ಹೊರ ಪ್ರಪಂಚದೊಳಗೆ ಸೇರದಂತಿರಲು ಗಾಳಿಯನ್ನು ೧೭ ಮೀ ನೆಲಮಟ್ಟದ ಎತ್ತರದಿಂದ ಒಳಸೇರಿಕೊಳ್ಳುವ ವ್ಯವಸ್ಥೆ ಇದೆ. ಟೊಳ್ಳಾದ ಪೆಟ್ಟಿಗೆಯಾಕಾರದ ನೆಲವನ್ನು ಮಾಡಲಾಗಿದ್ದು ತೂಗು ಸೇತುವೆಯಂತೆ ನೆಲವನ್ನು ತೂಗುಹಾಕಲಾಗಿದೆ. ನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಈ ನಗರವಿನ್ಯಾಸ ಗಾಳಿಗೆ ತಡೆಯೊಡ್ಡದಂತೆ ರೂಪುಗೊಂಡಿದೆ. ವೇಗದ ಗಾಳಿಯನ್ನು ತಡೆದು ನೆಲದಲ್ಲಿ ಮಂದವಾಗಿ ಹರಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡದ ಹೊರಭಾಗದಲ್ಲಿನ ಉದ್ಯಾನದಲ್ಲಿ ಈಗಾಗಲೇ ಒಳ್ಳೆಯ ಸೂಕ್ತ ಸಸ್ಯ ಸಂಕುಲದ ಬೆಳವಣಿಗೆಯನ್ನು ಸಹ ಮಾಡಲಾಗುತ್ತದೆ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತಿನ್ನಾರಿಗೆಷ್ಟು ಕಷ್ಟವೋ ?
Next post ಏನೇ ಬಂದರೂ

ಸಣ್ಣ ಕತೆ

 • ಕೆಂಪು ಲುಂಗಿ…

  -

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… ಮುಂದೆ ಓದಿ.. 

 • ಆವರ್ತನೆ

  -

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… ಮುಂದೆ ಓದಿ.. 

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ…

  -

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… ಮುಂದೆ ಓದಿ.. 

 • ಇನ್ನೊಬ್ಬ

  -

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… ಮುಂದೆ ಓದಿ.. 

 • ಕರಿ ನಾಗರಗಳು…

  -

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… ಮುಂದೆ ಓದಿ..