ಅಂಬಿಗನಾಗು ನನಗೆ ಇನ್ನು

ಅಂಬಿಗನಾಗು ನನಗೆ ಇನ್ನು
ಸಾಗಿಸಲಾರೆ ಈ ಸಂಸಾರವನು|
ಸಾಧಿಸಲಾರೆ ಎನನು ನಾನು
ಸಾಕಾದವು ಎಲ್ಲಾ ಸುಖಭಾಗ್ಯಗಳು||

ಜೀವನಪೂರ್ತಿ ದುಡಿದೆ
ನಾನು ತೃಪ್ತಿಯೇ ಇಲ್ಲ ಏನ್ನೆಲ್ಲಾ ಕಂಡರು|
ಪಡದೆ ನಾನು ಬಯಸಿದನ್ನೆಲ್ಲವನು
ಆದರೂ ಆಸೆಯು ಬಿಡುತ್ತಿಲ್ಲ ನನ್ನನು
ಬಾಯಲಿ ವೈರಾಗ್ಯ ಮನದಲಿ ನೂರಾಸೆ||

ನನಗೆ ಯಾರೂ ಸಮವಿಲ್ಲವೆಂದು
ನನ್ನನೇ ನಾನು ಮೆಚ್ಚಿಕೊಂಡು|
ಸಾವಿರ ವರುಷ ಬದುಕುವೆನೆಂದು
ಹಿಡಿದಾ ಹಟವ ಬಿಡದಲೆ ಬೆಳೆದು
ಮೋಹದ ಮಡುವಲಿ ನನ್ನನೆ ಬಿಗಿದು||

ಅರಿಯದೆ ನಿನ್ನಯ ಇರುವಿಕೆಯನ್ನು
ತಿಳಿಯದೆ ನಿನ್ನಯ ಮಹಿಮೆಗಳನ್ನು|
ಅಜ್ಞಾನದಿ ಅಂಧನಾಗಿ ಜೀವನನೆಡೆಸಿ
ವ್ಯರ್ಥವಾಗುತ್ತಿದೆ ಈ ನರಜನ್ಮ
ಇನ್ನೇಗಿಹುದೊ ನನ್ನ ಮುಂದಿನ ಜನ್ಮ! ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾರದರ್‍ಶಕ ಪ್ರಾಣಿಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೭

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…