ಬೆಳಕು ಬಂದಿದೆ ಬಾಗಿಲಿಗೆ
ಬರಮಾಡಿಕೊಳ್ಳಿರಿ ಒಳಗೆ|
ಹೃದಯ ಬಾಗಿಲತೆರೆದು
ಮನಸೆಂಬ ಕಿಟಕಿಗಳ ಒಳತೆರೆದು||

ಬೆಳಕೆಂದರೆ ಬರಿಯ ಬೆಳಕಲ್ಲ
ಇದುವೇ ಮಹಾಬೆಳಕು |
ನಮ್ಮಬದುಕ ಬದಲಿಸುವ ಬೆಳಕು
ನಮ್ಮಬಾಳ ಬೆಳಗುವಾ ಬೆಳಕು||

ಕೋಟಿ ಸೂರ್ಯ ಸಮವೀಬೆಳಕು
ಸರ್ವಕಾಲಿಕ ಸತ್ಯವೀಬೆಳಕು|
ಸರ್ವರನುದ್ದರಿಸೊ ಈ ಬೆಳಕು
ಅದುವೇ ನಮ್ಮ ಕೃಷ್ಣನೆಂಬಾ ಬೆಳಕು||

ಯುಗಯುಗಳಿಂದಲಿ
ಅನೇಕರನು ಉದ್ಧರಿಸಿದಾ ಬೆಳಕು|
ಕಲಿಯುಗದಲಿ ಕಾಮಧೇನು, ಕಲ್ಪವೃಕ್ಷವೀಬೆಳಕು|
ಅಲ್ಪ ಸಮಯದಿ ನೆನೆದರೂ ಸಾಕು
ಜನ್ಮ ಪಾವನವಾಗಿಸುವ ಬೆಳಕು
ಅದುವೇ ನಮ್ಮ ಕೃಷ್ಣನೆಂಬಾ ಬೆಳಕು|
*****