ಹಸಿವಿನ ಎದೆಯೊಳಗೆ ಕೂತು
ಕವಿತೆ ಕಟ್ಟಿ ಆಡುವ ಹಾಡುವ
ಹಂಬಲದ ಹುಚ್ಚು ರೊಟ್ಟಿಗೆ
ಅದರ ಬಾಯಿಗೆ ಸಿಕ್ಕಿ ನರುಕಿ
ಕಾಲಕೆಳಗೆ ನಲುಗಿ ನುಣ್ಣಗಾಗುವ
ಅಸಹಾಯಕತೆಯಲ್ಲೂ
ಹುಟ್ಟಿಬಿಡುತ್ತದೆ
ಕವಿತೆಯ ಸಾಲು.
*****