ಐಸುರ ಮೊದಲೋ ಮೋರುಮ ಮೊದಲೋ
ಬಲ್ಲವರ‍್ಹೇಳಿರಿ ಇದರ ಅರ್ಥ                    |ಪ|

ಅಲ್ಲಮಪ್ರಭುವಿನ ಅರಿಯದ ತುರುಕರು
ಪಂಜಪೂಜೆ ಮಾಡುವುದು ವ್ಯರ್ಥ                 |೧|

ಮಸೂತಿಯೊಳಗ ಮುಲ್ಲಾ ಕುಳಿತು
ಅಲ್ಲಾ‌ಅಂದನೋ ಒಂದ ಮಾತು                   |೨|

ಮಸೂತಿ ಮುರಿದು ಮೈಮ್ಯಾಲ ಬಿದ್ದು
ಮುಲ್ಲಾ ಸತ್ತಿಯಲ್ಲೋ ಗುಣವಂತ                  |೩|

ಹದಿನೆಂಟು ಜಾತಿ ಫಕ್ಕೀರರಾಗಿ
ರೂಪ ತಪ್ಪಿಸಿ ಹಾರ‍್ಯಾಡುತ್ತ                   |೪|

ಭಾಪುರೆ ಶಿಶುನಾಳಧೀಶನ ಸವ್ವಾಲ
ದಶದಿನದೊಳು ತಂದು ಸಾರೋ ಇದರ ಅರ್ಥ     |೫|
*****