ಮೂಕ ರೊಟ್ಟಿಗೆ
ಆಸ್ಥೆಯಿಂದ ಹಾಡು ಕಲಿಸಿ
ಸಂಭ್ರಮಿಸಿದ್ದ ಹಸಿವಿಗೀಗ
ರೊಟ್ಟಿಯ ಸಂಗೀತ ಕೇಳಲು
ಪುರುಸೊತ್ತಿಲ್ಲ.
ಆಸಕ್ತಿಯೂ ಇಲ್ಲ.
ಹಸಿವೆಗಾಗಿಯೇ ಕಲಿತ
ಪದಗಳನ್ನು ಹಾಡಲೂ ಆಗದೇ
ಬಿಡಲೂ ಆಗದೇ
ರೊಟ್ಟಿಗೆ ತಳಮಳ.
*****

ಕನ್ನಡ ನಲ್ಬರಹ ತಾಣ
ಮೂಕ ರೊಟ್ಟಿಗೆ
ಆಸ್ಥೆಯಿಂದ ಹಾಡು ಕಲಿಸಿ
ಸಂಭ್ರಮಿಸಿದ್ದ ಹಸಿವಿಗೀಗ
ರೊಟ್ಟಿಯ ಸಂಗೀತ ಕೇಳಲು
ಪುರುಸೊತ್ತಿಲ್ಲ.
ಆಸಕ್ತಿಯೂ ಇಲ್ಲ.
ಹಸಿವೆಗಾಗಿಯೇ ಕಲಿತ
ಪದಗಳನ್ನು ಹಾಡಲೂ ಆಗದೇ
ಬಿಡಲೂ ಆಗದೇ
ರೊಟ್ಟಿಗೆ ತಳಮಳ.
*****