ಮುಗಿದ ಕತೆಗೆ

ಮುಗಿದ ಕತೆಗೆ ತೆರೆಯ ಹಾಕಿ
ಬಾಳ ಪುಟದ ತೆರೆಯ ಬಿಚ್ಚಿ
ಕುಂಚ ಹಿಡಿದು ಬಣ್ಣ ಹಚ್ಚಿ
ಚಿತ್ತಾರ ಬಿಡಿಸಿತು ಚಂಚಲ ಮನಸು ||ಇದು||

ಭಾವಲತೆಯ ದಳವ ಬಿಡಿಸಿ
ಅರಳಿ ಚಂದ ಹೂವ ಮುಡಿಸಿ
ಮುಡಿಯ ಏರಿ ಒಲವ ತೋರಿ
ಮನವ ಸೆಳೆಯಿತು ಚಂಚಲ ಮನಸು ||

ಕತ್ತಲೆಯ ನೀಗಿಸಿ ಬೆತ್ತಲೆ
ಬೆಳಕನಿರಿಸಿ ಅಂಗಳ ಬೆಳಗಿ
ಬೊಗಸೆ ಕಂಗಳನೊಸೆದು ಕಲ್ಪನಾ
ಲಿಂಗವ ಬಯಸಿತು ಚಂಚಲ ಮನಸು ||

ಕನಸು ಕಂಡ ಮನಸಿಗೆ
ನೆನಪು ತಂದ ಹೊಸತಿಗೆ
ಸುಖ ಸೋಪಾನ ನೀಲಚಿತ್ತ
ಓಕುಳೀ ಎರಚಿತು ಚಂಚಲ ಮನಸು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ!
Next post ಅಮೃತ

ಸಣ್ಣ ಕತೆ

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…