Home / ಲೇಖನ / ಇತರೆ / ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ!

ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ!

ಲವ್ ಯಾನೆ ಪ್ರೇಮದ ಬಗ್ಗೆ ಓಲ್ಡ್ ಮಾಡಲ್ ಕವಿಗಳಿಂದ ಹಿಡಿದು ರೀಸೆಂಟ್ ಕವಿ ಸಾರ್ವಭೌಮರವರೆಗೂ ಎಷ್ಟೇ ಡಿಸೆಂಟ್ ಆಗಿ ಡಿಲೈಟ್ ಆಗಿ ಫ್ಲವರಿಯಾಗಿ ಪವರ್‍ಫುಲ್ ಆಗಿ ಬರೆದರೂ, ಬರೆದು ಪ್ರೇಮಿಸಿದರೂ ನೀವೇನೆ ಅನ್ನಿ ಲವ್ ಒಂತರಾ ಅಪಾಯ ಕಣ್ರಿ – ಅಪಾಯಕಾರಿ. ಹೀಗಂದರೆ ಲವ್ ಮಾಡೋ ಹುಡುಗ ಹುಡುಗಿಯರಿಗೆ ಶ್ಯಾನೆ ಕ್ವಾಪ ಬತ್ತದಲ್ವ. ಆದರೂ ಈ ಮಾತು ಬಹಳಷ್ಟು ಸುಳ್ಳಲ್ಲ. ‘ಪ್ರೇಮ ಅಮರ’ ಅಂತಾರಲ್ವ. ಆಫ್‌ಕೋರ್ಸ್ ತಕರಾರೇನಿಲ್ಲ ಬಿಡಿ. ಆದರೆ ಪ್ರೇಮಿಗಳು? ಲೈಲಾಮಜ್ನು ಕಾಲದಿಂದ ಇಂದಿನ ದೇವದಾಸ್ ಪಾರ್ವತಿವರೆಗೆ ಪ್ರಾಣ ಕಳ್ಕೊಂಡವರೇ ಹೆಚ್ಚು. ಇವರೆಲ್ಲಾ ಅಮರರಾಗಿದ್ದಾರೆ – ಎಲ್ಲಿ ? ಕಾವ್ಯಗಳಲ್ಲಿ, ಇವರು ವಾಸಿ ಬಿಡಿ. ಈಗಲೂ ಎಷ್ಟೋ ಪ್ರೇಮಿಗಳು ಸಮಾಜದಲ್ಲಿನ ಜಾತಿಭೇದ ಆಸ್ತಿ ಅಂತಸ್ಸು ಹೆತ್ತವರ ವಿರೋಧ ಆರ್ಥಿಕ ಅಭದ್ರತೆಯ ಅಡಕತ್ತರಿಗೆ ಸಿಲುಕಿ ಸಾವನ್ನಪ್ಪುತ್ತಲೇ ಇದಾರಲ್ಲ ಅವರೆಲಾ ಅಮರವಾಗಲಿಲ್ಲ ಕಾವ್ಯಗಳಾಗಲಿಲ್ಲ ಪೋಸ್ಟ್‌ಮಾರ್ಟ್ಂ ಆಗಿ ಸುಡುಗಾಡು ಸೇರಿದರು.

ಯಾಕೆಂದರೆ, ಓದುವ ವಯಸ್ಸಿನಲ್ಲಿ ಓದದೆ ಪುಸ್ತಕಗಳ ಕಡೆ ಕಣ್ಣೆತ್ತಿಯೂ ನೋಡದೆ ಹುಡುಗಿಯರತ್ತ ಸದಾ ಕಣ್ಣಾಡಿಸುವ ರೋಡ್‌ಸೈಡ್ ರೋಮಿಯೋಗಳು ಕಡೆಗೆ ಫುಟ್ಪಾತ್ ಆಗೋದೇ ಹೆಚ್ಚು ಅಲ್ವಾ? ಗ್ರೇಟ್ ಅನ್ನೋ ಪ್ರೇಮ ಮೊದಲು ಕಲಿಸೋದೇ ದಾಸ್ಯ ಪ್ರವೃತ್ತಿಯನ್ನು ಅರ್ಥಾತ್ ಗುಲಾಮಗಿರಿ. ಹುಡುಗಿಯನ್ನು ಪ್ರೇಮಿಸಲು ಕಮೆನ್ಸ್ ಮಾಡಿದನೆಂದರೆ ಕಲಿಯೋಕೆ ಫುಲ್ ಸ್ಟಾಪ್. ಹಿಡಿತಾನೆ ಬಸ್‌ಸ್ಟಾಪ್. ಮೊದಲು ಇಂಡಿವಿಜಿಯಾಲಿಟಿ ಕಳ್ಕೊತಾನೆ ಸೆಲ್ಫ್ ಡಿಸಿಶನ್ ಜೊತೆಗೆ ಕಾಮನ್ಸೆನ್ಸ್ ಕೂಡ ಸೆನ್ಸಾರ್ ಆಗಿ ಬಿಡುತ್ತೆ. ಅವಳನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವ ಭರದಲ್ಲಿ ಹಲವು ಆಟ ಕಟ್ಟುತ್ತಾನೆ. ವೇಷ ಹಾಕುತ್ತಾನೆ. ತನ್ನಲ್ಲಿ ಇಲ್ಲದ ಸಭ್ಯ ಗುಣಗಳನ್ನೆಲಾ ಪ್ರದರ್ಶಿಸುತ್ತಾನೆ. ಒಂದು ಹಂತದಲ್ಲಿ ಸಭ್ಯನೂ ಆಗುತ್ತಾನೆ ಅನ್ನಿ. ಅಟ್ ದಿ ಫಸ್ಟ್ ಅವಳ ದೃಷ್ಟಿ ತನ್ನತ್ತ, ತನ್ನೊಬ್ಬನತ್ತಲೇ ಕೇಂದ್ರೀಕರಿಸುವಂತಹ ‘ಜಾದು’ ಮಾಡಬೇಕಾದ ಸಾಹಸಕ್ಕೆ ಕೈ ಹಾಕುವುದು ಅವನ ಅನಿವಾರ್ಯತೆಯಲ್ಲೊಂದು. ಅದಕ್ಕಾಗಿ ಮೊದಲವಳ ‘ಬಾಡಿಗಾರ್ಡ್’ ಆಗುತ್ತಾನೆ. ಅವಳು ಅವನತ್ತ ನೋಡಿದರೂ ಸಾಕು ಸ್ವರ್ಗ ಮೂರೇ ಗೇಣು. ಅವಳು ಕಾಲೇಜಿಗೆ ಹೊರಟರೆ ಹಿಂದೆಯೇ ಇವನು ಮತ್ತಿವನ ಪಟಾಲಮುಗಳ ಜಂಬೂ ಸವಾರಿ. ಅದಕ್ಕೆ ತಕ್ಕಂತೆ ಈಗಿನ ಸಿನಿಮಾಗಳ ಕುಮ್ಮಕ್ಕು ಬೇರೆ. ಅವಳು ಮನೆಯಿಂದ ಬೀದಿಗಿಳಿದರೆ ಮೊದಲ ಮುಖದರ್ಶನ ಇವನದೆ. ಅವಳು ನೋಡಲಿ ಬಿಡಲಿ ಇವನೇ ನಗುತ್ತಾನೆ ಕ್ರಾಪ್ ಸರಿಪಡಿಸ್ಕೋತಾನೆ. ಅವಳನ್ನು ಸೇಫಾಗಿ ಕಾಲೇಜು ಮುಟ್ಟಿಸಿ ಅಲ್ಲಿಂದ ಮನೆಗೆ ಸೇಫಾಗಿ ಸೇರಿಸುವ ಸ್ಯಾಲರಿಯಿಲ್ಲದ ಥ್ಯಾಂಕ್‌ಲೆಸ್ ಜಾಬ್ ಅನ್ನು ನಿಯತ್ತಿನಿಂದ ನೆರವೇರಿಸುತ್ತಾ ಅವಳ ಒಂದು ಕುಡಿನೋಟ, ಕೂಲಾದ ನಗೆಗಾಗಿ ಸೂರ್ಯನ ಸುತ್ತ ಸುತ್ತುವ ಪ್ಲ್ಯಾನೆಟ್ ಆಗಿ ಬಿಡುತ್ತಾನೆ.

ಅವಳೆದುರು ಹೀರೋನಂತೆ ಕಾಣಿಸಿಕೊಳ್ಳಲು ಪೋಲಿ ಹುಡುಗರಿಂದ ದೂರ ಉಳಿಯುತ್ತಾನೆ. ಅವರು ಸ್ನೇಹಿತರೇ ಆಗಿದ್ದರೂ ಅಷ್ಟೆ. ಪ್ರೇಮಿಯಾದವನಿಗೆ ಪ್ರೇಮ ಸ್ವಾರ್ಥಿಯನ್ನಾಗಿಸುತ್ತದೆ. ಅವಳು ಇನ್ನೊಬ್ಬನೊಂದಿಗೆ ಮಾತನಾಡಿದರೆ ಇವನ ಹೊಟ್ಟೆಯಲ್ಲಿ ಬೆಂಕಿ, ಅದೇರಿ ಅಸೂಯೆ. ಅವಳು ತನಗಾಗಿ ಮಾತ್ರ ಎಂಬ ಹುಚ್ಚುತನ ಕಡೆಗೆ ಹತ್ಯೆಗೂ ಅವನನ್ನು ಪ್ರೇರೇಪಿಸಿ ಬಿಡುತ್ತದೆ. ಪ್ರೇಮ ನೋಡಿದ್ರಾ ಎಂತಹ ಅಪಾಯಕಾರಿ? ಇಷ್ಟಾದರೂ ತನ್ನವಳನ್ನು ಮೆಚ್ಚಿಸಲು ಸ್ಪೋರ್ಟ್ಸ್‌ಳಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತರುವ ಮೂಲಕ ಹುಡುಗಿಯರ ಕಣ್ಮನ ಸೆಳೆದರೆ ಕೆಲವರು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಡಿ ಕುಣಿದು ಮನಗೆಲ್ಲೋದುಂಟು. ಇಂಥವರ ಗುರಿ ಕೇವಲ ಹೃದಯ ಗೆಲ್ಲೋದಕಷ್ಟೆ ಸೀಮಿತವಾದರೆ ಇವರೆಂದೂ ರಾಷ್ಟ್ರಮಟ್ಟದ ಅಥ್‌ಲೆಟ್ಸ್‌ಗಿರಲಿ ಅಟ್ಲೀಸ್ಟ್ ಜಿಲ್ಲಾ ಮಟ್ಟದ ಸ್ಪೋರ್ಟ್ಸ್‌ಮೆನ್‌ಗಳೂ ಆಗದೆ ಒಳ್ಳೆಯ ಕಲಾವಿದರೂ ಆಗದೆ ಕೇವಲ ಕಾಲೇಜ್‌ ಹೀರೋಗಳಾಗಿ ಉಳಿದುಬಿಡುತ್ತಾರೆ. ಕಾಲೇಜು ಪಟ್ಟವಾದರೂ ಎಷ್ಟು ವರ್ಷ? ಕಾಲೇಜಿಗೆ ಗುಡ್ ಬಾಯ್ ಹೇಳಿದಾಗ ಇಂತಹ ಲವ್ ಬಾಯಸ್ ಅನಾಥರಾಗುತ್ತಾರೆ. ಪರೀಕ್ಷೆಗಳಲ್ಲಿ ನ-ಪಾಸ್ ಆಗೋರೇ ಹೆಚ್ಚು.

ನನ್ನ ಲೆಕ್ಕಾಚಾರದಲ್ಲಿ ಯಾರು ಕಾಲೇಜಿನಲ್ಲಿ ಕಷ್ಟಪಟ್ಟು ಹಗಲು ರಾತ್ರಿ ಓದುತ್ತಾರೋ ಅವರು ಕಾಸ್ ಗಳಲ್ಲಿ ಡಿಸ್ಟಿಂಕ್ಷನ್ ಗಳಲ್ಲಿ ಪಾಸಾಗಿ ಮುಂದೆ ಒಳ್ಳೆಯ ಪದವಿ ಪಟ್ಟಗಳನ್ನಲಂಕರಿಸಿ ‘ಹೀರೊ’ ಗಳಾಗಿ ಬಿಡುತ್ತಾರೆ. ‘ಕಾಲೇಜ್ ಲೈಫ್ ಈಸ್ ಎ ಗೋಲ್ಡನ್ ಲೈಫ್, ಸ್ಟೂಡೆಂಟ್ಸ್ ಲೈಫ್ ಈಸ್ ಎ ಡೈಮಂಡ್ ಲೈಫ್’ ಅಂತ ಭ್ರಮಿಸುತ್ತಾ ಹುಡುಗಿಯರಿಗೆ ಲೈನ್ ಹೊಡೆವ ಲಯನ್‌ಗಳು “ಬಿಲ್ಲಿ”ಗಳಾಗೋದೇ ಹೆಚ್ಚು. ಹೀರೋಗಳಂತೆ ಪೋಜ್‌ ಕೊಟ್ಟವರಂತೂ ಪ್ರೇಮಪಾಶಕ್ಕೆ ಸಿಲುಕಿ (ಅದಕ್ಕೇ ಪ್ರೇಮಪಾಶ ಅಂದಿದ್ದಾರೆ ನೋಡಿ ಹಿರೀಕರು) ಫೇಲ್ ಕಾಂಡಿಡೇಟ್ಗಳಾಗಿ ಓದುವ ಸುವರ್ಣ ಅವಕಾಶದಿಂದ ವಂಚಿತರಾಗಿ, ಅವಳಿಂದಲೂ ವಂಚಿತರಾಗಿ ಕಡೆಗೆ ರಿಯಲ್‌ಲೈಫ್‌ನಲ್ಲಿ ಜೀರೋಗಳಾಗುತ್ತಾರೆ. ಕಾರಣ ಸ್ಪಷ್ಟ : ಅವಳ ವಾಚ್ಮನ್ ಡ್ಯೂಟಿ ಮಾಡಿದವನಿಗಾಗಿ ಕಾಲವಾದರೂ ಯಾಕೆ ಕಾಯುತ್ತೆ ಹೇಳಿ? ಅವಳು ಒಲಿದು ಬಿಟ್ಟರಂತೂ ಅವನ ಫಜೀತಿಗಳೂ ಮತ್ತೆ ಹೆಚ್ಚುತ್ತವೆ. ಅವಳ ಎದುರು ಸದಾ ಟಿಪ್ ಟಾಪ್ ಆಗಿ ಕಾಣಬೇಕು. ಬೈಕಲ್ಲೇ ಬರಬೇಕು. ದಾನಶೂರನಂತೆ ವರ್ತಿಸಬೇಕು. ಬರ್ತ್‌ಡೇಗೆ ಪ್ರೆಸೆಂಟ್ಸ್ ಕೊಡಬೇಕು ಮಾಮೂಲಿ ‘ಡೇ’ಗಳನ್ನೂ ಸರಪ್ರೈಜ್ ಮಾಡೋಕೆ ಸಂತೋಷದ ಕ್ಷಣಗಳನ್ನು ಸೃಷ್ಟಿಸೋಕೆ ಆಗಾಗ ಗಿಫ್ಟ್‌ಗಳನ್ನು ಕೊಡುತ್ತಾ ಪ್ರೇಮವನ್ನು ‘ರಿನ್ಯೂವಲ್’ ಮಾಡ್ಕೊಬೇಕು. ಅವಳೊಂದಿಷ್ಟು ಸೋಶಿಯಲ್ ಗರ್ಲ್ ಆಗಿದ್ದರೆ ಹೋಟೆಲ್, ಸಿನಿಮಾ, ಪಾರ್ಕು, ಪಿಕ್‌ನಿಕ್ ಅಂತ ಪರದಾಡಬೇಕು. ಅಪ್ಪ ಕೊಟ್ಟ ಪರ್ಸ್ ಖಾಲಿಯಾದ ಮೇಲೆ ಸ್ನೇಹಿತರ ಪರ್ಸ್‌ಗಳಿಗೂ ಕೈ ಹಾಕುತ್ತಾನೆ. ಅದೇನೋ ಬಡ ಹುಡುಗರೇ ಪ್ರೇಮಿಗಳಾಗೋದು! ಇಂಥವರೆಲ್ಲಾ ರಾತ್ರಿ ಜಾಗರಣೆ ಮಾಡುತ್ತಾ ನಾಳೆಯ ಬಗ್ಗೆ ಟೈಂ – ಟೇಬಲ್ ಹೆಣೆಯುತ್ತಾ ಸ್ನೇಹಿತನ ಪರ್ಸನಷ್ಟೇ ಅಲ್ಲ ಪ್ರಾಣವನ್ನೂ ಹಿಂಡುವುದು ಪ್ರೇಮಿಗಳ ಲಕ್ಷಣ ಅಥವ ವಿಲಕ್ಷಣ ನೇಚರ್. ಇದಕ್ಕೆಲಾ ೨೪ ಗಂಟೆಗಳೂ ಸಾಲದಾದಾಗ ಓದಿಗೆಲ್ಲಿಯ ಕಾಲ? ಅವಳಿಗೇಂತ ಸಿಗರೇಟ್ ಬಿಡುತ್ತಾನೆ ಆಮೇಲೆ ಇಸ್ಪೀಟು, ಬಿಯರೋತ್ಸವ ಫ್ರೆಂಡ್ಸ್ ಜೊತೆ ಮೋಜು ಕಡೆಕಡೆಗೆ ಫ್ರೆಂಡ್ಸ್‌ಗಳನ್ನೂ ಬಿಡುವ ಆ ಬಡಪಾಯಿ ಅವಳು ತನ್ನನ್ನೇ ಬಿಡುತ್ತಾಳೆಂಬ ಪರಿವೆಯೇ ಇಲ್ಲದ ಮರಣಾನಂದದಲ್ಲಿ ತೇಲುತ್ತಾ ದಿನಗಳೆದು ಬಿಡುತ್ತಾನೆ. ಪರೀಕ್ಷೆಗಳು ಬರುತ್ತವೆ ಪಾಸ್ ಆಗುತ್ತವೆ – ಇಂವ ಮಾತ್ರ ಫೇಲು.

ಕನಿಕರದ ವಿಷಯವೆಂದರೆ ಎಷ್ಟೋ ಮಂದಿ ಅಬ್ಬೆಪಾರಿ ಪ್ರೇಮಿಗಳು ಕನಿಷ್ಟ ಅವಳ ಕೈಯನ್ನೂ ಟಚ್ ಮಾಡಿರೋಲ್ಲ. ಕಣ್ಣುಗಳು ಮುಗುಳ್ನಗೆ ವಿನಿಮಯ, ಕಾಡು ಹರಟೆಯಲ್ಲೇ ಕಾಲ ಕಳೆದು ಅವಳ ಸನಿಯವೇ ಮಹಾಭಾಗ್ಯವೆಂದು ಬಗೆದು ಭವಿಷ್ಯದಲ್ಲಿನ ಭಾಗ್ಯವನ್ನೆಲಾ ಕಳೆದುಕೊಳ್ಳುವ ಬಹುಸಂಖ್ಯಾತ ಸಂತರೂ ನಮ್ಮಲ್ಲುಂಟು. ಹಾಗೆ ನೋಡಿದರೆ ಇಷ್ಟೆಲಾ ಹುಡುಗರ ಸಂಪರ್ಕದಲ್ಲಿದ್ದೂ ಹೂವಿನ ಮೇಲಿನ ಮಂಜಿನ ಹನಿಯಂತೆ ಎನ್ ಜಾಯ್ ಮಾಡುವ ಹುಡುಗಿಯರು ಕ್ಲಾಸ್ ಗಳಲ್ಲಿ ಪಾಸಾಗಿರುತ್ತಾರೆ! ಮುಂದೆ ಓದಲು ಯೂನಿವರ್ಸಿಟಿಗಳಿಗೆ ಜಂಪ್ ಮಾಡುತ್ತಾರೆ ಪ್ರಬುದ್ಧರಾಗುತ್ತಾ ಹೋಗುತ್ತಾರೆ. ನಮ್ಮ ಅಬ್ಬೆಪಾರಿ ಪ್ರೇಮಿ ಗಡ್ಡಬಿಟ್ಟ ಕಳೆದುಹೋದ ದಿನಗಳನ್ನೇ ಮೆಲಕು ಹಾಕುತ್ತ ನಿರುದ್ಯೋಗಿಯಾಗಿ ಬೈ-ಟು ಕಾಫಿಗೂ ಗತಿಯಿಲ್ಲದೆ ಬೇಕಾರ್ ಅನಿಸಿಕೊಳ್ಳುತ್ತಾನೆ. ಹೆತ್ತವರಿಗಲ್ಲದೆ ತಮಗೆ ತಾವೇ ಅನ್ಯಾಯ ಮಾಡಿಕೊಳ್ಳುವ ಅಮಾಯಕರಿವರು, ಕೆಲವರಂತೂ ನಿಜಕ್ಕೂ ಪ್ರೇಮಿ, ಹಿರಿಯರನ್ನು ಧಿಕ್ಕರಿಸಿ ಒಂದಾಗೋ ‘ಧೀರರೂ’ ಇಲ್ಲದೇ ಇಲ್ಲ, ಇದಷ್ಟೇ ಅವರ ಸಾಧನೆಯಾಗಿ ಬಿಡುತ್ತದೆ. ಮುಂದೆ ಬಡತನದ ಭೂತ ಬೆನ್ನತ್ತಿ ಪ್ರೇಮದ ಭ್ರಮೆಯ ಪೊರೆ ಹರಿದಾಗ ನಿಟ್ಟುಸಿರುಗಳೇ ಅವರ ಸಂಗಾತಿ.

ಪ್ರೇಮಿಸಿದ ಹೆಣ್ಣನ್ನು ಮದುವೆಯಾಗೋದೇ ಜೀವನದ ಪರಮ ಗುರಿಯಾಗಬಾರದು. ಅದು ಮಹತ್ಸಾಧನೆಯೂ ಆಗದು. ಇಂಥವರಾರೂ ದೊಡ್ಡ ಸ್ಥಾನದಲ್ಲಿ ಪದವಿ ಪಟ್ಟಗಳಲ್ಲಿ ಅಲಭ್ಯ, ಕ್ಲಾಸ್ ಒನ್ ಆಫೀಸರ್‌ಗಳಾಗಿರೋರು, ಸಮಾಜದ ಉನ್ನತ ಸ್ಥಾನದಲ್ಲಿ ಇರೋರು ವಯಸ್ಸಿನಲ್ಲಿ ಖಂಡಿತವಾಗಿಯೂ ಪ್ರೇಮದ ಫೀವರ್‍ಗೆ ತುತ್ತಾಗಿರೋದಿಲ್ಲ. ಹಿಂದಿನ ಅಮರ ಪ್ರೇಮಿಗಳನ್ನೇ ತಗೊಳ್ಳಿ, ಇವರೆಲ್ಲಾ ದೇಶಕ್ಕಾಗಿ, ಸಮಾಜಕ್ಕಾಗಿ ಕಡೆಗೆ ತಮ್ಮ ಕುಟುಂಬಕ್ಕಾಗಿ ಸಹ ಏನನ್ನೂ ನೀಡದೆ, ಯಾವ ಸಾಧನೆಯನ್ನೂ ಮಾಡದೆ ಅರೆ ವಯಸ್ಸಿನಲ್ಲಿ ಸಾವಿಗೆ ಶರಣಾದ ಶರಣರು. ಇಂತಹ ಅಮಾಯಕರು, ಮುಗ್ದರು ಎಲ್ಲಾ ಕಾಲಮಾನದಲ್ಲೂ ಉಂಟು. ಭವ್ಯ ಭವಿಷ್ಯ ಬಯಸಿದವರು ಪ್ರೇಮಕ್ಕೆ ಕಾಲೇಜಲ್ಲೇ ಕಾಂಕ್ರೀಟ್ ಹಾಕದೆ ವಿದ್ಯೆಯತ್ತ ಕಾನ್ಸನ್‌ಟ್ರೇಟ್ ಮಾಡಬೇಕು. ಪ್ರೇಮ ಕೂಡ ಭದ್ರತೆ (ಸೆಕ್ಯೂರಿಟಿ) ಯನ್ನು ಅಪೇಕ್ಷಿಸುತ್ತದೆ. ದುಡಿದು ಸಾಕೋ ಯೋಗ್ಯತೆ ಇರೋ ಯೋಗ್ಯನ್ನೇ ಪ್ರೇಮ ಕೂಡ ಪ್ರೇಮಿಸುತ್ತೆ ಆತುರಬೇಡ ಕಣ್ರಿ.

ಅದೆಲ್ಲಾ ಸರಿ ಕಣ್ರಿ, ಆಮೇಲೆ ಪ್ರೇಮಿಸೋ ವಯಸ್ಸು ದಾಟಿರುತ್ತಲ್ಲ ವಯಸ್ಸು ನಮಗಾಗಿ ಕಾಯುತ್ತಾ ಅಂತ ನಿಟ್ಟುಸಿರು ಬಿಡುವಿರಾ? ಡೋಂಟ್ ವರಿ ಫ್ರೆಂಡ್ಸ್, ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ ಕಾಲದ ಮಿತಿಯಿಲ್ಲ ಓಲ್ಡ್‌ ಆಗದ ಗೋಲ್ಡ್ ಅದು! ಮದುವೆಯಾಗಿಯೂ ಪ್ರೇಮಿಸಬಹುದು. ಮುದುಕರಾದ ಮೇಲೂ ‘ಟ್ರೈ’ ಮಾಡಬಹುದು ಯಾಕೆಂದರೆ ಪ್ರೇಮಕ್ಕೆ ಸಾವಿಲ್ಲ. ನಮ್ಮ ಹೃದಯದ ಕೊನೆಯ ಬಡಿತದವರೆಗೂ ಅಂತಿಮ ಕ್ಷಣದವರೆಗೂ ಪ್ರೇಮಿಸಬಹುದು ಪ್ರೇಮಿಸುತ್ತಲೇ ಇರಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...