ಐಸುರ ಛೇ ಇದು ಏನು ಮೊಹರಮದ್ಹಬ್ಬ

ಐಸುರ ಛೇ ಇದು ಏನು
ಮೊಹರಮದ್ಹಬ್ಬ
ಮಾಡಿ ಧೀನ್ ಧೀನ್ ಅಂಬರು || ಪ ||

ಕೈಲೆ ಕೈವಾಲಿ ಕಟ್ಟಿ
ತಗಡಿನಸ್ತವನಿಟ್ಟಿ
ಶಾಸ್ರ ಧರ್ಮವ ಬಿಟ್ಟಿ || ೧ ||

ಕುದುರಿ ಕಂದೂರಿ ಮಾಡಿ
ಮಸೂದಿಗೆ ಓದೆಲ್ಲೊ ಎಡಿ
ಮುಲ್ಲಾ ಓದಕಿ ಮಾಡಿ || ೨ ||

ಅಲ್ಬೀದಾ ಅಳತಿತ್ತು
ಸತ್ತದೇವರ ಹೊತ್ತ
ತುರಕರಿಗಿಲ್ಲೊ ಗೊತ್ತು || ೩ ||

ಮಸುತ್ಯಾಗ ಹುಡುಗಾಟಮಾಡಿ
ಮೋರುಮ ಹೋತಲ್ಲ ಓಡಿ
ಶಿಶುನಾಳಧೀಶನ ನೋಡಿ || ೪ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೯
Next post ಗೋ – ಕುಲದ ಹಾಡು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…