ಭಾವನಾಲಹರಿ

ಭಾವನಾ ಲಹರಿಯಲ್ಲಿ
ಮಿಂದ ಆ ದಿನ
ನೆನಪಾಯ್ತು ಇಂದು ಈ ದಿನ||

ಅಂದಿನ ಆ ದಿನಕೂ
ಇಂದಿನ ಈ ದಿನಕೂ
ನಿನ್ನನಗಲಿದಾಕ್ಷಣ ಮರುಮಾತಾಗಿ
ಎನ್ನ ಮನ ಕದಡಿತು||

ಭಾವನೆಯ ಕಣ್ಗಳಲ್ಲಿ
ಕಾಣುವ ನಿನ್ನ ನೋಟ
ನೆನಪಿನಂಗಳದೆ ರೂಪವಾಯ್ತು
ರೂಪವಾಗಿ ಎನ್ನೆದೆಯೊಳಗೆ ಸ್ಥಿರವಾಯ್ತು||

ಸ್ಥಿರತೆ ಎಂಬ ಹೂಬಳ್ಳಿ
ಅರಳಿ ಆಸರೆಯ ನೀಗಿಸಿ
ಬಣ್ಣ ಬಣ್ಣಗಳಾನಂದದ
ಹೊನ್ನಕೊಡ ತುಂಬಿ ನೀರೆರೆಯಿತು||

ಹಚ್ಚಹಸಿರ ಬಣ್ಣ, ಕೆಂಪು ಹೂ ಬಣ್ಣ
ಹಳದಿ ತಾ ಎಲೆ ಎಲೆಗಳ ಮೇಲೆ
ಪುಟ ಪುಟಗಳ ಸಾಲು
ನಿನ್ನ ನೆನಪೆ ಲೇಖನಿಯಾಗಿಸಿತು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ತನ್ನಷ್ಟಕ್ಕೆ ಕಮ್ಸು ಟು ಅಸ್ಸು
Next post ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…