ಹುಲ್ಗರಿಯ ಬಳವಿಗೆಯ ಬಿಗಿದುಸಿರೊಳಾಲಿಸುತ ಮೇಲೆ ಬಾಂದಳದಾಳವಳೆಯೆ ಹವಣಿಸುತ ಶ್ವಾಸನಿಶ್ವಾಸದೊಳು ಒಳಹೊಕ್ಕು ಹೊರಬರುತ ಲೋಮದೊಳು ರಕ್ತ ಕಣದೊಡನೆ ಪಯಣಿಸುತ ತನ್ನ ಮೈ ಮೊದಲಾಗಿ ಜಗದೆಲ್ಲ ಕಾರ್ಯಗಳು ತನಗೆ ಹೊರತಾಗಿಯೇ ಜರಗುವುದ ಕಂಡು ಈ ದಿವ್ಯ ಸಂಭ್ರಮ...

ಒಂದರ ಹಿಂದೊಂದು ಸರಣಿ ಸ್ಫೋಟ ಜನಸಂದಣಿ, ಸಂತೆ, ಆಸ್ಪತ್ರೆಗಳಲ್ಲಿ ಉಗ್ರನೊ, ವ್ಯಾಗ್ರನೊ ಕಾಣದ ಕೈ ಅನ್ಯ ಧರ್ಮ ಸಹಿಸದ ಸಿನಿಕ ದ್ವೇಷ ರಾಜಕೀಯದ ಕೈಗೊಂಬೆ ಕೊಲ್ಲುತ್ತ ಅಮಾಯಕರ ನೆರೆಮನೆಗೆ ಬೆಂಕಿಯಿಡುವವನ ಮನೆ ಹೇಗೆ ತಾನೆ ಸುರಕ್ಷಿತ? ಆ ಮನೆಯ ಬೆಂಕ...

ಒಮ್ಮೆ- ರಮಣಮಹರ್ಷಿಗಳು ತಮ್ಮ ಶಿಷ್ಯರಿಗೆ ಉಪದೇಶ ನೀಡುತ್ತಿದ್ದರು. ಉಪದೇಶದ ಮಧ್ಯೆ ಒಂದು ಪ್ರಶ್ನೆ ಎತ್ತಿದರು. ‘ಜೀವನದಲ್ಲಿ ಮೂರು ಸೂತ್ರಗಳ್ಯಾವುವು?’ ಎಂದು ಅಲ್ಲಿದ್ದ ಶಿಷ್ಯರೆಲ್ಲರನ್ನೂ ಕೇಳುತ್ತಾ ಹೋದರು. ಮೊತ್ತ ಮೊದಲು ಮರುಳ ಸಿದ್ದಯ್ಯ ಸ್ವ...

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನೇಕ...

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ!...

ಮೂಲ: ಸುತಪಾ ಸೇನ್‌ಗುಪ್ತ ಮೂವಿ ಮುಗಿದಿದೆ; ಚಿಕ್ಕ ಓಣಿಗಳ ದಾಟಿ ಬಂದಿದ್ದೀಯೆ ಈಗ ಮುಖ್ಯರಸ್ತೆಗೆ ನೀನು ನಟ್ಟ ನಡುರಾತ್ರಿ; ಹೊರಟಿದ್ದೀಯೆ ಮತ್ತೆ ಮನೆಕಡೆಗೆ – ಬಲು ದೂರ. ರೈಲ್ವೆ ಹಳಿಬದಿಯಲ್ಲಿ ನಡೆಯಬೇಕಿದೆ ನೀನು ಮಂದ ಬೆಳಕಿನ ಕಂದೀಲನ್ನ...

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವ...

ಅರಿಯದಲೆ ಧಾವಿಸಿದೆ. ಹಸುಳನನು ಕ್ಷಮಿಸುವದು. ನಿನ್ನ ತಣ್ಣೆಲರೊಲವು ಬಂದು ಬೀಸಿತು ನನ್ನ ಆತುಮನ ನಂದನದಿ. ಉತ್ತಿ ಬಿತ್ತಿದ ಬೀಜ ವ್ಯಕ್ತವಾಯಿತು ಇಂದು. ನಿನ್ನ ಗೆಳತಿಯರಿವರು ಅಪ್ಸರಿಯರೆಲ್ಲ ನೀರೆರೆದ ಕೂದಲಿನಿಂದ ತಂದೀಂಟಿಸಿದರೆನಗೆ ದಿವ್ಯ ಜೀವಾಮ...

1...4546474849...107

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...