ಒಮ್ಮೆ- ರಮಣಮಹರ್ಷಿಗಳು ತಮ್ಮ ಶಿಷ್ಯರಿಗೆ ಉಪದೇಶ ನೀಡುತ್ತಿದ್ದರು. ಉಪದೇಶದ ಮಧ್ಯೆ ಒಂದು ಪ್ರಶ್ನೆ ಎತ್ತಿದರು. ‘ಜೀವನದಲ್ಲಿ ಮೂರು ಸೂತ್ರಗಳ್ಯಾವುವು?’ ಎಂದು ಅಲ್ಲಿದ್ದ ಶಿಷ್ಯರೆಲ್ಲರನ್ನೂ ಕೇಳುತ್ತಾ ಹೋದರು.
ಮೊತ್ತ ಮೊದಲು ಮರುಳ ಸಿದ್ದಯ್ಯ ಸ್ವಾಮಿಗಳದ್ದು- ಸ್ವಾಮಿಗಳ ಜೀವನದಲ್ಲಿ ಮಾತು, ಮಾನ, ಮರ್‍ಯಾದೆ ಎಂಬ ಮೂರು ಮುತ್ತುಗಳು ಒಡೆದು ಹೋಗದಂತೆ ಬಲು ಎಚ್ಚರಿಕೆಯಿಂದ ಬದುಕಬೇಕು…’ ಎಂದ.
“ಜೀವನದಲ್ಲಿ ನಾಲಿಗೆ-ಕಚ್ಛೆ-ಪಂಚೆ ಈ ಮೂರು ಜಾರದಂತೆ ಎಚ್ಚರಿಕೆ ವಹಿಸಬೇಕು. ಈ ಮೂರು ಒಮ್ಮೆ ಜಾರಿದರೆ ಇನ್ನೂ ಫಲವಿಲ್ಲ ಸ್ವಾಮಿಗಳೆ…” ಎಂದ ಮೃತ್ಯುಂಜಯ.
ಅಲ್ಲಿದ್ದ ಸೀನ್ಯ ಎದ್ದು ನಿಂತು ‘ಬಾಲ್ಯ, ಪ್ರೌಢ, ಯೌವ್ವನ ಈ ಮೂರು ಹಂತಗಳು ಹಾಳಾಗದಂತೆ ಬಲು ಎಚ್ಚರಿಕೆಯಿಂದ ಜೋಪಾನ ಮಾಡತಕ್ಕದ್ದು’ ಎಂದ.
ಗೌಡಪ್ಪನ ಸರದಿ ಬಂತು “ಸ್ವಾಮಿ… ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ಕೇಳಬೇಡ ಎಂಬ ಮೂರು ಸೂತ್ರ ಪಾಲಿಸಿದರೆ ಯಾವುದೇ ಭಯವಿಲ್ಲ” ಎಂದ.
ವಲಿಯ ಎದ್ದು ನಿಂತ ‘ಸ್ವಾಮಿ… ಬ್ರಹ್ಮ ವಿಷ್ಣು ಮಹೇಶ್ವರರ ನಿತ್ಯ ಮರೆಯಬಾರದು ಅವರೇ ಜೀವನ ಆಧಾರವೆಂದ.’
ಎಲಿವಾಳ ಅವರು ಎದ್ದು ನಿಂತು – ‘ಗುರುಗಳೆ ಜೀವನದಲ್ಲಿ ನಾನು ಎಂಬುದ ಬಿಡಬೇಕು. ನಾವು ಎಂಬುದ ಹಿಡಿಬೇಕು. ಇನ್ನೊಬ್ಬರ ಬಗ್ಗೆ ಅಸಹ್ಯ ಪಡುವುದ ಬಿಡಬೇಕು’ ಎಂದ.
ರಮಣ ಮಹರ್ಷಿಗಳು ಕ್ಷಣ ಮೌನ ವಹಿಸಿ- ‘ಶಿಷ್ಯರೆ… ಮಾನವ ಜನ್ಮ ದೊಡ್ಡದು. ಅದನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರೆ…. ಮೊದಲು ಸರಳ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಎರಡನೆಯದಾಗಿ ಮೌನವೇ ಆಭರಣ ಎಂಬುದನ್ನು ಪಾಲಿಸಬೇಕು. ದೇವರಿಗೆ ಸದಾ ಶರಣಾಗುವುದು. ಈ ಮೂರು ಸೂತ್ರದಲ್ಲಿ ಏನೆಲ್ಲ ಅಡಗಿದೆ. ಈ ಮೂರು ತತ್ವಗಳ ಪಾಲಿಸುವುದು ಕಡು ಕಷ್ಟ. ಈ ಮೂರು ಸೂತ್ರ ಪಾಲಿಸಿದರೆ ೧೪ ಲೋಕಂಗಳ ಗೆಲ್ಲಬಹುದು…’ ಎಂದರು.
ಶಿಷ್ಯರೆಲ್ಲ.. ಗುರುಗಳಿಗೆ ಅಡ್ಡ ಬಿದ್ದರು. ಮಹರ್ಷಿಗಳು ಹರ್ಷದಿ ಆಶೀರ್‍ವಾದಿಸಿದರು.
ಅಲ್ಲಿಗೆ ಅಂದಿನ ಉಪದೇಶಾಮೃತ ಮುಕ್ತಾಯಗೊಂಡಿತು. ಗುರುಗಳು ಧ್ಯಾನಸಕ್ತರಾದರು.
*****


















