ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್‍ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ...

ಇದೊಂದು ಬಗೆಯ ಹೂ ಮುಟ್ಟುವಂತಿಲ್ಲ ಮೂಸುವಂತಿಲ್ಲ ನೋಡಿ ಅನಂದಿಸು ಪಕಳೆ ಎಣಿಸಬೇಡ ದಳವ ದಣಿಸಬೇಡ ದಳ ದಳವಾಗಿ ಉದುರುವ ವರೆಗೆ ಕಾದರೆ ಅಂತ ರಾಳದಲ್ಲೇನಿದೆಯೋ ನೋಡಬಹುದು, ಅಲ್ಲಿಯವರೆಗೆ ಕಾಯಬೇಕು. *****...

ಉಂಗುರ ತೊಡಿಸಿದನಲ್ಲ ಎಂಥಾ ತಳಮಳ! ಏನಂದ? ಏನಂದ? ನೆನಪಿಲ್ಲ! ಏನಂದ? ಏನಂದ? ನೋಡಿಲ್ಲ! ಗುರುತಿಲ್ಲ…. ಕಲೆತಿಲ್ಲ…. ಅಂದನಲ್ಲ… ಇಲ್ಲ ಅವ…. ನಲ್ಲ ಅಲ್ಲವೇ ಅಲ್ಲ! ಉಂಗುರ ನೀರು ಪಾಲಾಯಿತೋ ಮೀನು ಪಾಲಾಯಿತೋ ತಾನೇ ಕಳಚಿಕ...

೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ ಬೇರೆಲ್ಲಿ ಇಲ್ಲ! ಎಲ್ಲ ಇಲ್ಲಿ ಎಂಬ ಅನುಭವಕ್ಕೆ...

ಈ ನಾಡೊಳು ಬದುಕಲು ಬಡಿವಾರ ಬೇಕೆ? ಎತ್ತನೋಡಿದರಲ್ಲಿ ಪರಿವಾರ ಉಳಿಸುವುದಿಲ್ಲ ನಮ್ಮ ಪರಿವಾರ ಪ್ರೀತಿ ಇಲ್ಲವೆಂದ ಮೇಲೆ ಬದುಕುವುದಾದರು ಹೇಗೆ? ದ್ವೇಷ ಹುಟ್ಟು ಹಾಕುವ ಧರ್ಮವೇತಕೆ ಮನುಜ ನಡೆದೇ ಹೋಯಿತು ಮನುಕುಲದ ಹೇಯ ಕೃತ್ಯ ಯಾರದೋ ಅಧಿಕಾರದ ಅಮಲಿನ...

ಹಿಂದೆ- ನಿನ್ನ ಅಂಗಅಂಗಗಳ ಅಂದವ ಆರಾಧಿಸುತ್ತಾ ಶೋಷಿಸಿದರು; ನಿನ್ನ ಪೂಜಿಸುತ್ತಾ ಶೋಷಿಸಿದರು. ಗೋಡೆ ಮೇಲಿನ ಚಿತ್ರವಾಗಿಸಿದರು ಮನೆಯೊಳಗಿನ ಗೃಹಲಕ್ಷ್ಮಿಯಾಗಿಸಿದರು. ಇಂದು- ನಿನ್ನ ಉಬ್ಬುತಗ್ಗುಗಳ ಅಳೆಯುತ್ತಾ ಶೋಷಿಸುತ್ತಿದ್ದಾರೆ. ನಿನ್ನ ದೇಹದ ಬ...

ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ ಕೆಟ್ಟುಬಿಡುವುದೆ ಸರಿ ಅಪವಾದವಿದ್ದಾಗ, ನಮಗೆ ಅನ್ನಿಸದಿದ್ದೂ ಪರರ ಅನಿಸಿಕೆಯಿಂದ ಕಳೆಯುವುದು ನ್ಯಾಯವಾದೊಂದು ಸಂತಸ ಆಗ. ನನ್ನ ರಕ್ತಕ್ಕೆ ಪ್ರಿಯವಾದ ನಡವಳಿಕೆಗಳ ಪರರ ಹುಸಿಗಣ್ಣು ನಿಯಂತ್ರಿಸುವುದೇತಕ್ಕೆ ...

ರಂಗನಾಥಪುರದಲ್ಲಿ ಸಭೆ ಮಾರನೆಯ ದಿನ ಬೆಳಗ್ಗೆ ಸಾಹೇಬರು ಒಂಬತ್ತು ಗಂಟೆಗೆ ಬಸ್ಸಿನಲ್ಲಿ ಬಂದಿಳಿದರು. ಅವರಿಗೆ ಗಂಗೇಗೌಡರ ನಾಯಕತ್ವದಲ್ಲಿ ಸಂಭ್ರಮದ ಸ್ವಾಗತ ದೊರೆಯಿತು. ಹೂವಿನ ಹಾರಗಳು, ತಟ್ಟೆಗಳಲ್ಲಿ ಹಣ್ಣು ಹಂಪಲು, ಕೈಗೆ ಕೊಡುವ ನಿಂಬೆಯಹಣ್ಣುಗಳ...

ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ...

1...89101112...16

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...