ಅದು ಬಳ್ಳಿಯಂತೆ ಕಾಲಿಗೆ ತೊಡರುತ್ತಾ ಭಯದಂತೆ ಎದೆಯೊತ್ತಿ ಉಸಿರುಗಟ್ಟಿಸುತ್ತಾ ಎತ್ತಲೆತ್ತಲೂ ಕೂರಲೂ ನಿಲ್ಲಲೂ ಬಿಡದೇ ಹಠ ಹಿಡಿದ ಮಗುವಿನಂತೆ ಜೀವ ಹಿಂಡುತ್ತಿತ್ತು. ಪ್ರೀತಿಯಿಂದ ಮೃದುವಾಗಿ ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು ಇಂಚಿಂಚೂ ವ್ಯಾ...

(೨೦೧೩ರ ಆರಂಭದಲ್ಲಿ ನಡೆದ ಅಸ್ಸಾಮಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾಡಿದ ಆಂಗ್ಲ ಭಾಷಣದ ಕನ್ನಡ ರೂಪ) ಮೊಟ್ಟ ಮೊದಲಿಗೆ, ನನ್ನನ್ನು ಆಹ್ವಾನಿಸಿದ ‘ಅಸ್ಸಾಂ ಸಾಹಿತ್ಯ ಸಭಾ’ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಂತೆಯೇ ನನ್ನ ಪ್ರ...

“ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ? ಒಳ್ಳೇದಾಗಿರುತೀಯೆ, ನೀನು? ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ? ಕಡೆಗೆ ಏನಾಗುವ, ನೀನು?” “ಬೆಟ್ಟದಾ ಹೊಡೆಯಲ್ಲಿ ಹುಟ್ಟಿದ ಹನಿಯಾಗಿ; ತೊಟ್ಟಾದೆ ತಟುಕಾದೆ, ನಾನು. ಬೆಟ್ಟಾದೆ, ಬ...

ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು – ವಿ...

ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ ಕಣ್ಣೆಯು ಗಂಧ ಮರದ ಚಂದ ಗಾಳಿ ನಮ್ಮ ಪ್ರೇಮ ಸಾರಿದೆ ಚಂಡು ಹ...

ಉರಿಯುತ್ತಿದೆ ಬೆಂಕಿ ಧಗಧಗ ಕೆನ್ನಾಲಿಗೆಯ ಚಾಚಿ ಭಗ ಭಗ ಮುಗಿಲೆತ್ತರ ವ್ಯಾಪಿಸಿ ಆಕ್ರಮಿಸುತ್ತಿದೆ ಉದ್ದಗಲ ನೋಡಲೆಷ್ಟು ಚೆನ್ನ ಸಪ್ತ ವರ್ಣಗಳ ನರ್ತನ ಕಣ್ತುಂಬಿಸಿ ಮನ ತುಂಬಿಸಿ ಆನಂದಿಸುವ ಪರಿ ಕೇಕೆ ಹಾಕಿದ ಕೂಗಿಗೆ ಮುಗಿಲಲ್ಲಿ ಪ್ರತಿಧ್ವನಿ ಒಬ್ಬ...

ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ಮಾಯದ ಬೇಳುವೆ ಹುರುಳಿಲ್ಲ ಕೊಂದು ಕೂಗಿತ್ತು ನೋಡಾ ಗುಹೇಶ್ವರ [ಆರಕ್ಕೆ-ಬೇಳುವೆ, ಆಶ್ಚರ್ಯ, ಗೊಂದಲ, ಮರುಳು] ಅಲ್ಲಮನ ವಚನ. ...

೧ ಕಾಲನ ಕಲ್ಲಿನ ಚಕ್ರಗಳು! ತೊಡೆಗಳ ಎಲುವಿನ ಅಚ್ಚುಗಳು! ಪೊಳ್ಳಿನ ಹೃದಯದ ಹಂದರವು! ಗಂಡಿನ ಹೆಣ್ಣಿನ ಹುಡುಗರ ಕಳಸ! ೨ ಕಟ್ಟೋ ಮಂಗಲ ಸೂತ್ರಗಳ! ರುಂಡ ದಿಂಡಗಳ ಮಾಲೆಗಳ! ಬೆಳಗೋ ಕಂಗಳ ಕತ್ತಲೆದೀಪ! ಹಾಕೋ ನಿಡಿದುಸಿರಿನಧೂಪ! ೩ ಬಿಗಿಯೋ ಕೂದಲ ಹಗ್ಗವನ...

1234...15

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....