ಮೇಲೆ ನೋಡಿದರೆ ನೀಲಾಕಾಶ- ಅಲ್ಲಿ ರವಿ, ಚಂದ್ರ ನಕ್ಷತ್ರಗಳಿದ್ದಂತೆ, ರಾಹು ಕೇತು ಶನಿಗ್ರಹಗಳೂ ಇವೆ. ತೊಟ್ಟವಳು ಗಹನ ಗಂಭೀರ! ಕೆಳಗೆ ನೋಡಿದರೆ ವಿಶಾಲ ಪೃಥ್ವಿ, ಎಲ್ಲವನು ಹೊತ್ತಿರುವ ಭೂಮಿತಾಯಿ, ಇಲ್ಲಿ ಚೆಲುವು ಇದ್ದಂತೆ ಕ್ರೌರ್ಯವೂ ಇದೆ. ಹೊತ್ತ...

ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ. ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ. ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ ಎಲ್ಲಿ ಬಿಡುಗಡೆ? ನೀನ...

ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ...

ಸತ್ಯಾನ್ವೇಷಣೆ ಮಾಡುವುದೇ… ಕಥೆಗಳು ರೈಲುಬಿಡುವ ಚಿತ್ರಣದೊಳಗೆ ತನ್ನವೇ ವಜ್ರಖಚಿತ ವಸ್ತ್ರ ಒಡವೆ ನೋಡಿ ತಾನೇ ಮುಖವಾಡವಾಗುತ ಕಿರೀಟದೊಳಗೆ ದೇವರು ಹುದುಗಿ ಉಸಿರುಗಟ್ಟಿ ನಡುರಾತ್ರಿಗೆ ಎದ್ದೋಡಿದ ಬಗೆಗೆ ಮೂರ್ಖನಾಗಿ ನಿಂತಲ್ಲೇ ನಿಂತು ಯೋಗದಲ...

ಹಾವರ್ಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ Henry Devid Thoreau ಅಮೇರಿಕಾದ ಮಹಾನ್ ತತ್ವಜ್ಞಾನಿ, ಕವಿ. ೧೮೧೭ ಜುಲೈ ೧೨ರಂದು ಯು.ಎಸ್ ನ ಮೆಸಾಚುಸೆಟ್ಸನ ನಲ್ಲಿ ಜನನ.ಇತನ “Walden” ಎಂಬ ಕೃತಿ ವಿವರಣಾತ್ಮಕ ಪ್ರಬಂಧಗಳ ಸಂಕಲನವಾಗಿದ...

(ಸುಗ್ಗಿ ಕಟ್ಟಿಕೊಂಡು ಹೋದ ಕೂಡಲೆ ಹೇಳುವುದು) ತಾನತಂದ ತಾನಾ ನಾಽನ ತಂದನಾ ತಾನ ತಂದಾನಾನೋ ತಂನಾನೇಳಾ ತಾನಾ || ೧ || ಮೊಳ್ವಾಲ್ಗ್ ಮಲೆ ಹೋಯ್ಕೋಳೀ ಭೂಮಿ ತನಸೇರಲೀ ತೆಂಗಲು ಸರೂಗರಕೇ ವಂದೇ ಸಲ ಬಂದೋ ತಾನಾ || ೨ || ತಂಗಲು ಊರೂಗರಕೇ ವಂದೇ ಸಲ ಬಂದ...

1...3132333435...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...