ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ ಬೇರೆ ಔಷಧಿ ಪಡೆದು ಸೇವಿಸುವುದು ಕಷ್ಟ. ಜತೆಗೆ ಇವೆಲ್ಲಕ್ಕೂ ಹಣವ...

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯಲ್ಲ...

‘ಇವಳ’ ತೆಕ್ಕೆಯಲ್ಲಿ ‘ಅವಳ’ ಕಲ್ಪಿಸಿ ಕೊಳ್ಳುತ್ತ ‘ಅವಳೆ’ ಎಂದು ಭ್ರಮಿಸಿ ಸ್ಪಂದಿಸಿದಾಗ ‘ಇವಳಿಗೆ’ ‘ನನ್ನ ಮೇಲೆ ಎಷ್ಟೊಂದು ಮೋಹ’ ಅನ್ನಿಸಿ ಸುಖಿಸಿದರೆ ನನಗೆ ಪಾಪ! ಅನ್ನಿಸುತ್ತದೆ ಸಮಾಧಾನ ತರುತ್ತದೆ! ನನ್ನ ಒಳತೋಟಿ ಬಹಿರಂಗವಾಗಿಲ್ಲವಲ್ಲ ಅಂತ ...

ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ. ದುಃಖ ದುಮ್ಮಾನಗಳಿಂದ ಒಬ್ಬ ಮನುಷ್ಯ ಎಷ...

ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ. ಮತ್ತೆ ನಿಯಂತ್ರಣಕ್ಕೆ ಬಾರದ ಸಕ್ಕರೆ ಅಂಶ. ...

ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ ಮೈದುಂ...

ಜೀವನದುದ್ದ ಲಂಗೋಟಿ ಕಟ್ಟು ಫೀಸ್ ಕಟ್ಟು ಪರೀಕ್ಷೆ ಕಟ್ಟು ಕಡತ ಕಟ್ಟು ತೆರಿಗೆ ಕಟ್ಟು ತಾಳಿ ಕಟ್ಟು ಮನೆ ಕಟ್ಟು ತೊಟ್ಟಿಲು ಕಟ್ಟು ಸಾಲ ಕಟ್ಟು ಗಂಟು ಮೂಟೆ ಕಟ್ಟು! *****...

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿ...

ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ ಮೆಚ್ಚಿಕೆಯಾಚೆ ಬೆಳೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....