ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ [ಒಕ್ಕುದ-ಲದ್ದೆ-ಹುಲ್ಲಿನ ಹೊರೆ] ಲದ್ದ...

(ಶ್ರೀಮಾನ್ ಗುಡಿಪಾಟಿ ವೆಂಕಟಾಚಲಮ್ ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿ೦ದ ಬರೆದುದು) ಸೀತಾ:- ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ, ಬಹುದಿನದಿ ಬಳಲಿಹೆನು; ನೊಂದಿಸಿರಿ, ಬೆಂದಿಹಿರಿ ಅಗಲಿಕೆಯ ಅನುದಿನದ ಅಗ...

ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮ...

ದುಡಿಯೋಣ ನಾವು ಒಂದಾಗಿ ದುಡಿಯೋಣ ಬೆವರ ಸುರಿಸಿ ದುಡಿಯೋಣ ಮನಕೆ ಸಂತಸ ತುಂಬೋಣ ||ದು|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗೆಜ್ಜೆ ನಾದ ಉಣ್ಣ ಬಡಿಸಿ || ಸದ್ದು ಗದ್ದಲ ಇಲ್ಲದಂತೆ | ಹೊನ್ನ ಮಳೆಯ ಸುರಿಸೋಣ ||ದು|| ಒಂದೇ ಜಾತಿ ಒಂದೇ ಮತವೆಂಬ | ಪಚ್ಚೆ ...

ಗುರಿ ಸಾಧನೆಯತ್ತ ಹೆಜ್ಜೆಹಾಕು ಹಿಡಿದ ಪಥ ನ್ಯಾಯವಾಗಿದ್ದರೆ ಸಾಕು ಮೇಲ್ಮಟ್ಟದ ವಿಚಾರದಿ ನಿನ್ನ ಓಲೈಸುವುದು ಸಾರ್ಥಕ ಬಾಳು ನಿನಗೆ ತಂದು ಕೊಡುವುದು ತುಸು ಅರಿತು ನೀನು ಧನ್ಯನೆನ್ನಬೇಡ ಭಕ್ತಿವಂತ ನೀನ ಅಹಂಕಾರಬೇಡ ಪವಾಡ, ಚಮತ್ಕಾರಗಳ ಮಾಡಬೇಡ ಅವೆಲ...

ನಡುರಾತ್ರಿ ಪರಿಯಂತರ ನೇಮರಾಜ ಸೆಟ್ಟಿಯು ಮನೆಗೆ ಬಾರದೆ ಇರುವದರ ಕಾರಣವನ್ನು ತಿಳಿಯದೆ ದಿಗ್ಭ್ರಾಂತಿಯಿಂದ ಅವನ ಸತಿಸುತರು ನೌಕರ ಜನರು ಖೇದಪಟ್ಟು ಊರು ಇಡೀ ಅವನನ್ನು ಹುಡುಕಿದರು. ಎಲ್ಲಿ ನೋಡಿದರೂ ಅವನು ಸಿಕ್ಶಲಿಲ್ಲ. ಯಾರ ಹತ್ತಿರ ಕೇಳಿದರೂ ತಾನರ...

ಯಾರಣ್ಣ ನೀ ಬಿಡುಗಣ್ಣನೇ | ಎದೆಗೆಳೆಯ ! ಕುಳಿತಿಹ ತಣ್ಣನೇ ಮಾನವನ ಕರ್ಮವ ಬಿಮ್ಮನೇ | ಸುಖದುಃಖ ನೋಡುವೆ ಸುಮ್ಮನೇ ಸಂತಾಪ ಜಾಲಕೆ ಅದರದೇ | ಮರಣಕ್ಕೂ ವಿಧಿಗೂ ಬೆದರದೇ ಕುರುಡು ಜಗ ಉರುಳುವುದ ಕಾಯುವೆ | ಸಾಕ್ಷಿ ಕಣ್ಣೂ ನೋಯವೇ ? ಈ ವಕ್ರಚಕ್ರದ ಜೊತ...

ಕಾನಡಾ ೧ ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು, ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು, ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು. ೨ ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ, ನಿನ್ನ ...

ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! ಸೋತವರು ಅವನೇಳಿದಂತೆಯೇ ಕೇಳಬೇಕಂತಮ್ಮಮ್ಮ| ಮಾತಿನಲ್ಲೇ ಮನ...

ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ? ಸದ್ಯ ನಿಮ್ಮ ಭೂಮಿ ಬೇಡ ಬಂಗಲೆ ಬೇಡ ಮೊದಲು ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಮರ್‍ಯಾದೆ ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...