ಎಲ್ಲಿದೆ ಸುಖ? ಯಾವುದು ಸುಖ? ಒಂದುಡುವುದರಲ್ಲಿದೆಯಾ? ಒಂದುಂಬೋದರಲ್ಲಿದೆಯಾ? ಚೆನ್ನಾಗಿ ಸಾಗಾಗಿರುವ ಗೊಬ್ಬರ, ಗೋಡು ತಿಂದ, ಮೇಲೆ ತಣ್ಣಗೆ ನೀರು ಹಾದ, ಭೋಗವಾದ ನೆಲದಲ್ಲಿ ಕಸುಬುದಾರನೊಬ್ಬ ಬೆಳೆಸಿದ ರಂಗುಳಿಸುವ ತೋಟದ ನಾಗವಳಿ ಬಳ್ಳಿ ಕೊನೆ ಇಕ್ಕು...

ಕಾಲನು ಮುರಿಯದಿರಿ – ಕೋಳಿಯ ಕಾಲನು ಮುರಿಯದಿರಿ ||ಪ|| ತನ್ನಯ ಪಾಡಿಗೆ ತಾನು ಎಲ್ಲೋ ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ|| ಅನ್ನವನ್ನು ಕೇಳುವುದೇ? ಕುಡಿಯಲು ನೀರನು ಕೇಳುವುದೇ? ಶಿಕ್ಷಣ ಕೊಡಿ ಎಂದು ಕೇಳುವುದೆ? ಆರೋಗ್ಯವನ್ನು ಕೇಳುವುದ...

ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ ಕೈಸವರಿದ ಮತ್ತೆ ಭುಜವನ್ನು ಅಲುಗಾಡಿಸಿ ಕೆನ್ನೆ ಸವರಿದ. ಇದೆಲ್ಲಾ ಬಹಿರಂಗವಾಗಿ ಎಲ್ಲರೆದುರ...

ಚುಟುಕ ಬರೆಯುವುದು ನನಗೊಂದು ಗೀಳು ಎಲ್ಲವೂ ಯಥಾರ್‍ಥವಲ್ಲ ಅರೆಬರೆ ಸುಳ್ಳು ಬರೆದುದು ಹತ್ತರಲಿ ಒಂಬತ್ತು ಜೊಳ್ಳು ಒಂದು ಮುತ್ತಾದಾಗ ನಾನಾದೆ ಮರುಳು *****...

ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ ದೈವ ನನಗೊಂದು ಕಟ್ಟಳೆಯನ್ನು ವಿಧಿಸಿತು, ನಿನ್ನ ಪ್ರಿಯ ಸುಖ ಸಮಯದಲ್ಲಿ ತಲೆಹಾಕದೆ ನೀನೆ ಕರೆಸುವ ತನಕ ತೆಪ್ಪನಿರು ಎಂದಿತು. ನಾನು ಸೇವಕ ತಾನೆ ? ಒಡೆಯ ವಿಧಿಸಿದ ವಿರಹ- ಕಾರಾಗೃಹದ ವಾಸ ಒಪ್ಪಿ ಬಾಳುತ್ತೇನ...

ತಿಳಿಯಾದ ವಾತಾವರಣ ಈ ಎಲ್ಲಾ ತಲೆ ಬಿಸಿಗಳ ಮಧ್ಯೆ ಅನುರಾಧ ಬಂದಿಳಿದಾಗ ಮನೆಯಲ್ಲಿ ಎಲ್ಲಾ ನೋವು ಮರೆಯಾಗಿ ಹರ್ಷದ ಹೊನಲೇ ಹರಿಯುತ್ತದೆ. ಎಲ್ಲರಲ್ಲೂ ಉತ್ಸಾಹ ತುಂಬಿಕೊಳ್ಳುತ್ತದೆ. ಸುಶೀಲಮ್ಮ ಕಳೆದು ಹೋದ ಯೌವನ ತುಂಬಿಕೊಳ್ಳುತ್ತಾರೆ. ರಾಮಕೃಷ್ಣಯ್ಯನ...

ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ ಕನ್ನಡಕ್ಕಾಗಿ ಮಿಡಿಯಲಿ ಮನ ಕನ...

1...34567...13

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....