ಉಗಿಯುತ್ತಿದೆ ಊರು ಓಡಿ ಮೋರಿಯಲ್ಲಿ ಮಲಗು ಅರಸುತ್ತಿದೆ ಕಲ್ಲು ದೊಣ್ಣೆ ಬಿಲಗಳಲ್ಲಿ ಅಡಗು ನಿಂತ ನೆಲವೆ ನುಂಗುತ್ತಿದೆ ಬೆಂತರ ಬೆನ್ನಟ್ಟುತ್ತಿದೆ ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು. ಮುಕ್ತ ಇವನು ಮಾನದಿಂದ ಸರಿತಪ್ಪಿನ ಜ್ಞಾನದಿಂದ ಉಂಡ ಮ...

ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ – ವಿಜ್ಞಾನೇಶ್ವರಾ *****...

ನಿರಂತರವಾದ ಅಂತರದಿಂದ ನೆಲಮುಗಿಲುಗಳ ಮಿಲನವಾಗುವುದಿಲ್ಲ ಆಕಾಶವು ದೂರ ದೂರಕೆ ಸರಿದು ಅಂತರದ ವ್ಯಾಸವನ್ನು ಹೆಚ್ಚಿಸುತ್ತ ನನ್ನ ನಿನ್ನನೂ ಹತ್ತಿರ ಬರಲು ಬಿಡುವುದಿಲ್ಲ ಎಷ್ಟು ಕಾಲದಿಂದ ಒಳ ಮಾತುಗಳು ತುಟಿವರೆಗೆ ಬಂದು ನಿಂತು ಬಿಟ್ಟಿವೆ. ಒಳಗಿನ ಭಾ...

ಹಸಿರು ಎಲೆಯಲಿ ಉಸಿರ ಕಲೆಗಳು ಪ್ರಕೃತಿ ಚುಂಬಿದ ನರ್ತನ || ಚುಮು ಚುಮು ಹನಿಯಲಿ ಸುಮಗಳು ಅರಳಿ ನಲಿವ ಸ್ಪಂಧನ || ಮನದ ಭಾವನೆ ಕದವ ತೆರೆಯೆ ದುಂಬಿ ಒಲಿದ ಚಂದನ || ಸರಸ ವಿರಸ ಹರುಷದಲಿ ಅನಂತ ದಿವ್ಯರೂಪ ಸಮಾಗಮ || ಕಲೆಯ ಸಿರಿಯ ಧರೆಯಲಿ ಹಸಿರ ಉಸಿರ...

ಶಿವಾನುಭವವೆಂದರೆ ಅದೊಂದು ಪತ್ರಿಕೆಯೆಂದು ಬಹು ಜನರಿಗೆ ಗೊತ್ತು. ಆದರೆ ಶಿವನೂ ಅವನ ಅನುಭವವೂ ಕಲ್ಪನಾ ಸೃಷ್ಟಿಯೊಳಗಿನ ಮಾತೇ ಎಂದು ಕಲಿತವರು ಕೈಯೆತ್ತಿ ಹೇಳುವರು. ಶಿವಾನುಭವವು ಒಂದು ಸಿದ್ಧಿಯಾಗಿದ್ದು ಅದನ್ನು ಸಾಧಿಸಿದರೆ ಅದ್ಭುತ ಶಕ್ತಿಗಳು ಲಭಿ...

ಮಾತೆ ಉದರದಿ ಉದಿಸಿ ಬಂದೆ ಭಾವಿ ಲೋಕದ ಕನ್ಸು ಕಂಡೆ ನಶ್ವರದ ಬಾಳು ಕರಗಿತು ತಂದೆ ಏನು ಬೇಡಲಿ ಹರಿಯೆ ನಿನ್ನ ಮುಂದೆ ತಾಯಿ ತಂದೆ ಬಂಧು ಜೊತೆಯಾದರು ತಿಳಿಯುವನಂತಾಗಲೇ ಕರಗಿದರು ಬದಕನು ಹಂಚಿಕೊಳ್ಳವರು ಬಂದರು ಕರಗಿದವು ಗಳಿಗೆ ಯಾರು ಅರಿಯರು ನಿಸರ್ಗ...

ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರ...

ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ ಸಂತೈಸಿ ಹೇಳಿತ...

ಈ ಭೂಮಿ ನಮ್ಮದು ಆಕಾಶ ನಮ್ಮದು ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು || ನಮ್ಮ ಭೂಮಿ ಗರ್ಭದಲ್ಲಿ ಭ್ರೂಣಗಳ ಕೊಂದರು ಆಕಾಶದ ಅನಂತವನ್ನು ಆಪೋಶನೆಗೊಂಡರು ಬೀಸೊ ಗಾಳಿ ಎದುರು ನಿಂತು ಗಾಳ ಹಾಕಿ ಹಿಡಿದರು ಕುಡಿವ ನೀರ ಕಣ್ಣ ಕಳೆದು ಕುರುಡಾಗಿಸಿಬಿ...

ದೇವರು ದೊಡ್ಡವನು. ಮನುಷ್ಯನಿಗೆ ಅನುಕೂಲವಾಗಲೆಂದೇ ಎರಡು ಕಿಡ್ನಿಗಳನ್ನು ನೀಡಿದ್ದಾನೆ! ಚೀನಾದ ಬೀಜಿಂಗ್‌ನ ಜಿನ್‌ಹುವಾ ನಗರದ ದೊನ್‌ಗ್ಯಾಂಗ್ ಪೀಪಲ್ಸ್ ಆಸ್ಪತ್ರೆಯಲ್ಲಿ ದಿನಾಂಕ ೨೮.೦೭.೨೦೧೫ರಂದು ಮಂಗಳವಾರ ದಿನದಂದು ಸತತವಾಗಿ ಎರಡು ತಾಸುಗಳವರೆಗೆ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...