ಸುಬ್ಬನು “ಸುಗುಣಗಂಭೀರ”. ಜನರನ್ನುತಿದ್ದರು- “ಹೆಂಡತಿಯನ್ನು ಅಂಕೆಯಲ್ಲಿಟ್ಟು ಆಳುವುದನ್ನು ಸುಬ್ಬನಿಂದಲೇ ಕಲಿಯಬೇಕು” ಎಂದು, ನಿಜಕ್ಕೂ ಅಹುದು, ಸುಬ್ಬನ ಮೊದಲನೆ ಮಡದಿಯು ಆ ಗಂಭೀರದ ಪ್ರಖರತೆಗೆ ಸುಟ್ಟು ಭಸ್ಮವಾಗಿದ್...

ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ ಬಿಗಿದಿದೆ ಮಲಗಿರುವ ಒಡೆಯನಿಗೆ ಎಚ್ಚರುಸು ...

ಏಕೆ? ಕಣ್ಣಂಚಲಿ ಕಂಬನಿ ಹೊರಸೂಸಿ ಕಣ್ಣಬಟ್ಟಲುಗಳು ತುಂಬಿ ಬಂದಿಹವು| ಯಾವುದೋ ಎದೆಯಾಳದ ನೋವ ಹೊರಹಾಕಲು ಹೃದಯ ತಳಮಳಿಸುತಿಹುದು|| ಹಳೆಯ ಪ್ರೇಮದನುಭವದ ಸಿಹಿಕಹಿನೆನಪು, ನನ್ನ ನೆನಪಿಸಿಯೊಮ್ಮೊಮ್ಮೆ ದುಃಖವನು ತಂದಿಡುವುದು|| ಅಂದು ನಿನ್ನಂತರಂಗವ ಅರ...

ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್‌ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇ...

ರಂಗವಲ್ಲಿ… ರಂಗವಲ್ಲಿ ಈ ರಂಗದಲ್ಲಿ ಬರೆದೇವು ನಾವು ಬಾಳಿ ಬದುಕಿದ ರಂಗವಲ್ಲಿ ಪ್ರೀತಿ ಚೆಲ್ಲಿ ಸ್ನೇಹ ಚೆಲ್ಲಿ ಬಂದೆವಿಲ್ಲಿ ಬಾಳಿಗೊಂದು ಬಣ್ಣವಾದೆವೀ ರಂಗದಲ್ಲಿ || ನರನಾಡಿಯಲ್ಲಿ ನೂರೆಂಟು ಕಣ್ಣು ಅಭಿನಯವೆ ನಮ್ಮ ಬದುಕು ಕಲೆಯನ್ನು ನಂಬಿ ...

ಯಾವುದೇ ಪ್ರಾಚೀನ ಕೃತಿಯ ಓದು ನಮ್ಮ ಪ್ರಜ್ಞೆಯ ವಿಚಾರವೇ ಹೊರತು ಆರಾಧನೆಯ ವಿಚಾರವಲ್ಲ. ಈ ಪಾತಳಿಯಲ್ಲಿ ಸಮಕಾಲೀನ ಜಗತ್ತಿನ ಕಣ್ಣುಗಳ ಮೂಲಕ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆ ಮಾಡುವಾಗ ಕೃತಿಯ ಬಗೆಗೆ ಸಹಾನುಭೂತಿಯನ್ನು ಬಿಟ್ಟು ಕೊಡದೆ ಅದರ ತಾತ...

ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ || ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ ಉಂಡದ್ದು ಧೂಳು ಕುರುಡುತನ ನೀರು ನಾಚಿಕೆಯ ಹೊರಗೆ ತಳ್ಳಿ || ೨ || ನ...

ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ ಪೂರೀಬಾಜಿ ಮತ್ಸ್ಯಾವತಾ...

ಬಾಹ್ಯ ಸ್ವರೂವದ ವಸ್ತುಗಳಿಗೆ ಉದ್ದ ಎತ್ತರ, ತೂಕಗಳ ಮಾಪನಗಳನ್ನು ಮಾಡವುದನ್ನು ಕಂಡಿದ್ದೇವೆ. ಆದರೆ ಭಾವನಾತ್ಮಕಕ್ಕೆ ಸಂಬಂಧಿಸಿದ ಪ್ರೇಮವನ್ನು ಅಳೆಯಲು ಮನೋವಿಜ್ಞಾನಿಗಳು ಇತ್ತೀಚೆಗೆ ಒಂದು ಮಾಪನವನ್ನು ಕಂಡು ಹಿಡಿದಿದ್ದಾರೆ. ಇದನ್ನು ಕಂಡು ಹಿಡಿದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...