ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧|...

ಅದೊಂದು ಹುಚ್ಚಾಸ್ಪತ್ರೆ ಆ ಆಸ್ಪತ್ರೆಯ ಬಾವಿಗೆ ಬಿದ್ದ ಹುಚ್ಚನನ್ನು ಮತ್ತೊಬ್ಬ ಹುಚ್ಚ ಬಾವಿಗೆ ಹಾರಿ ಪ್ರಾಣ ಉಳಿಸಿದ್ದ. ಅದೇ ದಿನ ಸಂಜೆ ಆ ಹುಚ್ಚು ಪ್ಯಾನಿಗೆ ನೇಣು ಹಾಕಿಕೊಂಡು ತನ್ನ ಪ್ರಾಣ ಕಳೆದುಕೊಂಡ. ಹುಚ್ಚಾಸ್ಪತ್ರೆ ಡಾಕ್ಟ್ರು ಮತ್ತೊಬ್ಬ ...

ಅಯೋಧ್ಯೆಯಲ್ಲಿ ಅಂದು ಹುಚ್ಚೆದ್ದು ಹರಿದ ಕೇಸರಿಹೊಳೆಯಲ್ಲಿ ಕೊಚ್ಚಿ ಹೋದ ಹೆಣಗಳೆಷ್ಟು ಹೇಳೋ ರಾಮಾ! ದೇಶದ ನಾಡಿಯಲ್ಲಿ ಹರಿದ ರಕ್ತದ ಕೆಂಪು ಮಡುಗಟ್ಟಿ ನಿಂತು ಹೆಪ್ಪುಗಟ್ಟಿದೆಯಲ್ಲೋ ರಾಮಾ ಮಂಜುಗಟ್ಟಿದೆಯಲ್ಲೋ! ಧರ್ಮಲಂಡ ಭಂಡ ಭಗವಾಗಳು ಹಚ್ಚಿದ ಕೋ...

ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ ಜನ್ಮದ ಋಣತೆರುವ ...

ನನ್ನ ಜನರು ನನ್ನ ಜೊತೆ ಎಲ್ಲಿ ಹೋದರಿರುವರು || ನನ್ನ ಜನರು ನನ್ನ ಜೀವನ ಬದುಕು ನೀಡಿದವರು || ಹೆತ್ತ ಒಡಲು ತಂಪು ನೀಡಲು ಅಮೃತ ಉಣಿಸಿದವರು || ಹಿರಿಯರೆನ್ನ ತಂದೆ ತಾಯಿ ಕಿರಿಯರೆನ್ನ ಬಂಧುಬಳಗ || ಜಾತಿ ನೀತಿ ಭೇದ ಭಾವವಿಲ್ಲ ನನ್ನ ಜನರೆ ನನಗೆಲ್...

ನನ್ನ ಮದುವೆ ಆದ ಮೊದಲ ವರ್ಷದ (೧೯೬೧) ದೀಪಾವಳಿಗೆ ಮಾವನವರಿಂದ ಆಮಂತ್ರಣ ಬಂದಿತ್ತು. ಮಾವನ ಮನೆ ತಲುಪಿದಾಗ ಅಲ್ಲಿ ಇನ್ನೂ ಇಬ್ಬರು ಅಳಿಯಂದಿರು ಆಗಲೇ ಬಂದು ಬೀಡುಬಿಟ್ಟಿದ್ದರು. ಅಳಿಯಂದಿರು ತಂದಿರುವ ಪಟಾಕಿ, ಮತಾಪು, ಸಿಹಿ ತಿಂಡಿಗಳ ಪ್ಯಾಕೆಟ್ಗಳನ...

ಹರಿ ಮುಕುಂದ ನೀನೆ ಸರ್ವ ನಿನ್ನಿಂದಲೆ ಈ ಬಾಳಿಗೊಂದು ಪರ್ವ ನಾಳಿನ ಬಾಳಿಗೆ ನೀನೇ ಹಿತೈಷಿ ನನ್ನ ಬದುಕಿಗೆ ನೀ ನಾದೆ ಖುಷಿ ಹಗಲು ಇರಳು ಮಾಡಿ ನಿನ್ನ ಧ್ಯಾನವ ಮತ್ತೆ ಪಡೆಯುತ್ತಿರುವೆ ಆತ್ಮ ಜ್ಞಾನವ ನಿನ್ನ ನೆನಪೊಂದು ಅಮೃತದ ಪಾನ ನಿನ್ನ ಸಾಮಿಪ್ಯದ ...

ಕಾಲವೇ ಎಲ್ಲಾ ಈ ಕಾಲನ ಮುಂದೆ, ಕಾಲದ ಜೊತೆಯಲಿ ನಾವಿಕರೇ ಎಲ್ಲಾ|| ಕಾಲವೇ ಬೆಲೆಯ ತರುವುದು ಕಾಲವೇ ಬೆಲೆಯ ಕಳೆವುದು| ಕಾಲವೇ ಮಾನ ತರುವುದು ಕಾಲವೇ ಮಾನ ಕಳೆವುದು|| ಕಾಲವೇ ಕತೆಯ ಬರೆವುದು ಕಾಲವೇ ಕತೆಯ ಅಳಿಸುವುದು| ಕಾಲವೇ ಪ್ರಶ್ನೆಗಳ ತರುವುದು ಕ...

ಹೃದಯವನ್ನು ವನ ಮಾಡಿದೆ. ಸಂತಸದ ಉಸಿರು ಹಸಿರಲ್ಲಿ ಮೂಡಿತು. ಚಳಿಗಾಲ ಬಂದು ಎಲೆ ಎಲ್ಲಾ ಉದುರಿತು. ಮತ್ತೆ ಬೇಸಿಗೆ ತಾಪ ಸಹಿಸಲಾರದೇ ವಸಂತನಿಗಾಗಿ ಕಾದು ಕುಳಿತೆ. ದಟ್ಟ ಮೋಡಗಳು ಮೂಡಿ ಮಳೆ ಸುರಿಯಿತು. ಚೈತ್ರದ ಚಿಗುರು ಮೂಡಿ ಕೋಗಿಲೆ ಮತ್ತೆ ಪಲ್ಲವ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...