ಸಾಗರದ ಕ್ಷಾರ ನೀರಿನಲ್ಲಿ ಇಂದ್ರನಗರಿಯಂತೆ ಕಾಣಿಸುತ್ತವೆ ಹವಳ ದಿಬ್ಬಗಳು. ಇವನ್ನು ನಿರ್ಮಿಸಿದುದು ಪ್ರಾಣಿಲೋಕದ ಕ್ಷುಲ್ಲಕ ಜಲಚರ ಜೀವಿಗಳು. ಪ್ರತಿಯೊಂದು ಹವಳವು ಸಾವಿರಾರು ಸಿಲಿಂಟರೇಟ್ ಪ್ರಾಣಿಗಳ ಸಮೂಹವಾಗಿದೆ. ಸುಮಾರು ಎರಡು- ಮೂರು ಸೆಂಟಿಮೀಟ...

ಬಡವನಡುಗೆಯ ಸೂತ್ರಗಳೆನ್ನ ಕವನಗಳು ಕಾಡಿನೊಳಂತೆ ಬೆಳೆವ ಕಂದಮೂಲಗಳನುಪಚರಿಸಿ ಬಡಿಸಿಹೆನೀ ರುಚಿಯ ಗ್ರಹಿಸುವೊಡೆ ಹಸಿದುಂಬ ತುಡುಗಿನೊಳರಸುವ ಮನವಿರಬೇಕಲ್ಲದೊಡೆ ಜಿಡ್ಡಿನನ್ನವನುಂಡ ಪೇಟೆ ಮನಕಿದೊಗ್ಗದು – ವಿಜ್ಞಾನೇಶ್ವರಾ ***** ಜಿಡ್ಡಿನನ್ನ...

ಬೆಳಗದಿರು ಕದಿರ ನನ್ನವಳು ಬಳಿಯಿಲ್ಲ ನಿನ್ನ ಬೆಳಗು ಹಾಯಿ ತರುವುದಿಲ್ಲ. ಯಾಕೆ ದಣಿಯುವೆಯೋ ಮಾರುತ ನನ್ನವಳು ಬಳಿಯಿಲ್ಲ ನೀನು ಹೇಗೆ ಬೀಸಿದರೂ ನನ್ನ ಮನವರಳುವುದಿಲ್ಲ. ತರುಲತೆಗಳೇ ನಿಮ್ಮದೇ ಭಾಗ್ಯ ವಿರಹವೆಂಬುದಿಲ್ಲ ಮುಕ್ಕಾಗದೆಂದೂ ನಿಮ್ಮ ಅಪ್ಪುಗ...

ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ ಅಲ್ಲಿಯ...

ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರ...

ಹೂವು ಮಿತಭಾಷಿ ಮರಿ ದುಂಬಿಯ ಜೊತೆ ಸ್ನೇಹ ಮಾಡುವುದು ಗಾಳಿಯೊಡನೆ ಲಲ್ಲೆಯಾಡುವುದು ಚಿಟ್ಟೆಯನೂ ಮಾತಿಗೆ ಎಳೆಯುವುದು ಪ್ರೀತಿಯೆ ಹೂವಿನ ಭಾಷೆ ಅದಿಲ್ಲದಿರಲು ಪೂರೈಸದು ಹೂವಿನೊಂದಿಗೆ ಮಾತಾಡುವ ಆಶೆ. *****...

ಅಧ್ಯಾಯ ೧೮ ಜಸ್ವಂತ್ ಮತ್ತೆ ನಿರಾಸೆ ಆಶ್ರಮದ ಕೆಲಸಗಳ ಮಧ್ಯೆ, ಮಿಂಚುವಿನ ಒಡನಾಟದಲ್ಲಿ ಹೆಚ್ಚು-ಕಡಿಮೆ ಜಸ್ವಂತ್ ಮರೆತೇಹೋಗಿದ್ದ. ಮೊದಮೊದಲು ಆಗೊಮ್ಮೆ ಈಗೊಮ್ಮೆ ನೆನಪಾಗಿ ಮನಸ್ಸು ಕದಡುತ್ತಿದ್ದರೂ ಇತ್ತೀಚೆಗೆ ನೆನಪೇ ಆಗುತ್ತಿರಲಿಲ್ಲ. ಅಂದಿನ ತಿ...

ನಿನ್ನ ಹಂದರದ ಪರದೆಯನ್ನೊಮ್ಮೆ ಕಳಚಿಟ್ಟುಬಿಡು. ಲೋಕದ ಮೋಹ ಮಕಾರಗಳು ಚಿಗುರುತಿವೆ. ದೆಸೆದಿಕ್ಕುಗಳು ಚೈತ್ರ ಚಿಗುರ ಮೀಯುತ್ತಿವೆ ಮನದ ಬನಿ ಕೆನೆಗಟ್ಟಿದೆ. ಓ..ಸಾವೇ ಕನಿಕರಿಸು ಕಾಡಿಗೆಯ ಕಣ್ಣು ಕಪೋಲದ ಕೆಂಪು ಕೆಂದಾವರೆ ತುಟಿಗಳು ಅರಳಿ ನಗುತ್ತಿವ...

“ಸಂಪ್ರದಾಯಗಳು ಸಮಾಜದ ಭದ್ರತಾ ಪಡೆ” ಎಂದು ಸಮಾಜ ವಿಜ್ಞಾನಿ ಜೀರಿಂಗ್ಸ್ ಹೇಳಿದ್ದಾನೆ. ಸಮಾಜವೊಂದು ಜಡವಾಗುತ್ತ ಚಲನ ಹೀನ ಸ್ಥಿತಿ ತಲುಪುತ್ತಿದ್ದಾಗ ಚಲನಶೀಲತೆಯುಂಟುಮಾಡುವ ಕ್ರಮವಾಗಿ ಈ ಭದ್ರತಾಪಡೆ ವ್ಯೂಹವನ್ನು ಭೇದಿಸಲೇಬೇಕಾಗುತ್...

1...7071727374...111

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....