ಸತ್ತ ಕನಸನ್ನೆತ್ತಿ ಮತ್ತೆ ನೀರೆರೆದು ಚಿಗುರಿಸಿದ ನೀರೆ ನೀನು ಯಾರೆ ? ಮುಗಿಲಲ್ಲಿ ಅಲೆಸಿರುವ ಕೀಲುಕುದುರೆ, ನನ್ನ ಅಮಲಿನಾಳದಲದ್ದಿದಂಥ ಮದಿರೆ. ಉರಿವ ಬಿಸಿಲಿಗೆ ತಂಪುಗಾಳಿ ಸುಳಿಸಿ ಮಣ್ಣಲ್ಲಿ ಮೋಡಗಳ ಬಣ್ಣ ಕಲೆಸಿ ಮಾತ ಮರ್ಜಿಗೆ ಸಿಗದ ಉರಿಯ ಚಿಗ...

ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮ ಬಾಳೆ ಬದುಕು ಹೊಂಬಾಳೆ ಕಾಯೆ ನಮಗೆ ಚೇತನವೇ ಬಾಳಿಂದು ಮುಡಿಪು ದೇವಿಯೆ ಕರುನಾಡ ತಾಯ...

ಗಿರಡ್ಡಿ ಗೋವಿಂದರಾಜರ ಹೊಸ ಪುಸ್ತಕ ‘ಪ್ರಮಾಣು’ ನನ್ನ ಮುಂದಿದೆ. ಇದೊಂದು ಲೇಖನಗಳ ಸಂಕಲನ, ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ‘ಹೊನ್ನಾರು ಮಾಲೆ’ಯಲ್ಲಿ ಪ್ರಕಟಿಸಿದ್ದು. ಗಿರಡ್ಡಿಯವರು ಆಗಿಂದಾಗ್ಗೆ ಬರೆದು ಈಗಾಗಲೇ ಬೇರೆ ಬೇರೆ ಕಡೆ ಬಿಡಿಯಾಗಿ ಪ...

ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ “ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ.” ಶೀಲಾ: “ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ.” ರಾ...

ಎರಡು ಹಕ್ಕಿಗಳು ಬಾಳನ್ನು ಬಹುವಾಗಿ ಪ್ರೀತಿಸುತ್ತಾ ಅನಂತ ಪಯಣದಲ್ಲಿ ಸಾಗಿದ್ದವು. “ಒಂದು ಹಕ್ಕಿ ಪೀತಿಯೇ ನನ್ನಗುರಿ” ಎಂದಿತು. ಇನ್ನೊಂದು ಹಕ್ಕಿ “ಜ್ಞಾನವೇ ನನ್ನ ಗುರಿ” ಎಂದಿತು. ಮೊದಲ ಹಕ್ಕಿ ಹೇಳಿತು- “ಪ್...

ಮಾತನಾಡಿದರೆ ಬಾಯ್ಮುಚ್ಚಿಸುವ ಆಡದಿದ್ದರೆ ಬಾಯ್ಬಿಚ್ಚಿಸುವ ಮಾಟಗಾರ ಹಸಿವು. ಒತ್ತಾಯಕ್ಕೆ ಆಡಿದ್ದು ತಾನಲ್ಲ ಒತ್ತರಿಸಿಟ್ಟಿದ್ದಕ್ಕೆ ಆಡದೇ ಉಳಿದದ್ದು ತಾನಲ್ಲ. ತನ್ನ ಆತ್ಮ ಸಾಕ್ಷಾತ್ಕಾರವೇ ಅಯೋಮಯ ರೊಟ್ಟಿಗೆ. *****...

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ ಕೌನೆರಳು ಕವಿದ ಗೋಡೆಯ ಮೇಲೆ ಗಡಿಯಾರದ ಮೆದು ಶಬ್ದಗಳು, ನೀನು ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು ನಿನ್ನಯ ಪಾದದ ಗುರುತುಗಳು. ನನ್ನ ಮನೆಯ ಅಂಗಳದ ಆಕಾಶದ ನೀಲಿಯಲಿ ಅದ್ದಿ ಬೆರೆಯ...

ಸೊಳ್ಳೆ ನಮಗೆ ಪ್ರಮುಖ ಪೀಡೆಗಳಲ್ಲೊಂದು. ಅವು ಹರಡುವ ಹಲವು ಘಾತಕ ರೋಗಗಳಿಂದ ಬಚಾವಾಗಲು ನಾವು ಅವುಗಳ ವಿರುದ್ಧ ಸಮರ ಸಾರುತ್ತಲೇ ಇದ್ದೇವೆ. ಎಲ್ಲೆಡೆ ಈಗ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆನಾಶಕ ಕಾಯ್ಲ್, ಮ್ಯಾಟ್ ಮತ್ತು ಆವಿಕೃತ ದ್ರವಗಳ ಉಪಯ...

1...34567...9

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...