ಬ್ರಿಟನ್ನಿನ ಮುದ್ರಣ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಇದನ್ನು ಮೊದಲು ಬಾರಿಗೆ ತಯಾರಿಸಿದ್ದಾರೆ. ಇತ್ತೀಚೆಗೆ ಅಭಿವೃದ್ದಿಗೊಂಡ ಈ ಪಾಲಿಯೆಸ್ಟರ ಬಟ್ಟೆಯ ಎಳೆಗಳು ಬಹಳ ವೈಶಿಷ್ಟ್ಯವನ್ನೊಳಗೊಂಡಿವೆ. ಅವುಗಳ ದಪ್ಪ ಈ ಹಿಂದಿನ ನೂಲಿಗಿಂತ ತೀರ ಕಡಿಮೆ. ಮೃದುತ್ವಕ್ಕೆ ಹೆಸರಾದ ರೇಷ್ಮನೂಲಿಗಿಂತ ಈ ಹೊಸ ಪಾಲಿಯೆಸ್ಟರ್ ಬಹಳ ನುಣುಪಾಗಿದೆ. ಇದನ್ನು ರಾಶಿ ಹಾಕಿ ಉಣ್ಣೆಯ ಎಳೆಗಳಂತೆ ಹೆಣಿಯಬಹುದು. ಎಳೆಗಳ ಮೇಲೆ ಚುಕ್ಕಿ ಚುಕ್ಕಿಗಳಂತೆ ಸೂಕ್ಷ್ಮಗಾತ್ರದ ಗಿಣ್ಣುಗಳನ್ನು ಸೇರಿಸಬಹುದು. ಈ ಪಾಲಿಯೆಸ್ಪರ್ ನೂಲನ್ನು ಪುನರ್‌ಬಳಕೆ ಕೂಡ ಮಾಡಬಹುದು. ಬಳಕೆಯಾಗಿ ತಾಜ್ಯಗೊಂಡ ಇದರ ಎಳೆಗಳನ್ನು ಸ್ವಚ್ಛಗೂಳಿಸಿ ಪುನರ್ ಬಳಕೆ ಮಾಡುವುದು ಬಹಳ ಸುಲಭದ ಕೆಲಸ. ಹೀಗೆ ಪುನರ್‍ಬಳಕೆಗೊಂಡ ನೂಲಿನಿಂದಲೇ ತಯಾರಾದ ವಿಶಿಷ್ಟ ಬಗೆಯ ಬಟ್ಟೆಗಳು ಈಗ ವಿದೇಶಗಳಲ್ಲಿ ಹೆಚ್ಚು ಜನಪ್ರಿಯಯಾಗುತ್ತವೆ. ಈಗ ಕಾರ್ಪೆಟ್‌ಗಳ ತಯಾರಿಕೆಯಲ್ಲಿಯೂ ದಿಂಬು, ಕಾರಿನ ಸೀಟ್‌ಗಳ ತಯಾರಿಕೆಯಲ್ಲಿಯೂ ಪಾಲಿಯೆ ಸ್ಟಾರ್‌ನ ಬಳಕೆ ಆಗುತ್ತಲಿದೆ.
*****



















