ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು ಗೊಂಬೆಯು ಇವನಿಗವನೇ ನೆರಳು || ಗುಡ...

ನೋಡಿ, ಮತಾಂತರ ಅನ್ನೋದು- ಆದು ವೈಯಕ್ತಿಕವೋ, ಸಾಮೂಹಿಕವೋ- ಆರೋಗಯಕರ ಅಲ್ಲ. ಮತಾನೇ ತೊಲಗಬೇಕು ಅನ್ನೋ ಈ ವೈಜ್ಞಾನಿಕ ಯುಗದಲ್ಲಿ ನನಗೆ ಇದೊಂದು ಹಾಸ್ಯ. ಹರಿಜನರು ಮುಸ್ಲಿಮರಾದರೆ ಆರ್. ಎಸ್. ಎಸ್, ಪೇಜಾವರ ಸ್ವಾಮಿಗೆ, ವಿಶ್ವ ಹಿಂದೂ ಪರಿಷತ್ತಿನವರ...

ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ “ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ… ಇದೆಂಥ ಊರು..?” ತಿಮ್ಮ ಅಚ್ಚರಿಯಿಂದ ಕೇಳಿದ “ಅದೇನನ್ನು ಕೇಳಿದೆ ನೀನು?” ಅಪರಿಚಿತ ಹೇಳಿದ “ಸಾಲ” *****...

ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ. ...

ಅಧ್ಯಾಯ -೪ “ಈಕೆ ನನ್ನ ಮಗಳು, ಪರಿಣಿತಾ, ಒಂದು ವಾರದ ಹಿಂದೆ ಬಿ.ಇ. ಕಂಪ್ಯೂಟರ್ ಕೋರ್ಸ್‌ಗೆ ಸೇರಿಸಿದೆವು. ಇವಳ ಸಿ‌ಇಟಿ ರ್‍ಯಾಂಕಿಂಗ್ ಬಹಳ ಕಡಿಮೆ ಇದ್ದು, ಮೆರಿಟ್ ಸೀಟ್ ಎಲ್ಲೂ ಸಿಗಲಿಲ್ಲ. ಕೊನೆಗೆ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟ್ ...

ಮಾನಸಿಕವಾಗಿ ಗಂಡ ಮ್ಯಾಚಿಂಗ್ ಆಗದೇ ಇದ್ದರೂ…. ಒಳಗೊಳಗೆ ತೊಳಲಾಡಿದರೂ…. ಚಿತ್ತಾರದ ಮಾಂಗಲ್ಯ ಮ್ಯಾಚಿಂಗ್ ಕುಂಕುಮ ಬೇಕು ಫ್ಯಾನ್ಸಿ ಯುವತಿಯರಿಗೆ *****...

1...456789

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...