Month: March 2017

#ಹನಿಗವನ

ವ್ಯತ್ಯಾಸ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮಣ್ಣಿಗೂ ಕಣ್ಣಿಗೂ ವ್ಯತ್ಯಾಸವಿಷ್ಟೆ ಮಣ್ಣು ನೀರ ಇಂಗುತ್ತದೆ ಕಣ್ಣು ನೀರ ನುಂಗುತ್ತದೆ *****

#ಕವಿತೆ

ಪಾಪ ಆ ಸೂರ್ಯ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಪಾಪ ಆ ಸೂರ್ಯ ಒಂದೇ ಒಂದು ದಿನ ಕೆಲಸ ತಪ್ಸಲ್ಲ; ಬೆಳಕು ಹರೀತಿದ್ದ ಹಾಗೆ ಹಾಜರು, ಒಂದು ನಿಮಿಷ ಲೇಟ್ ಮಾಡಲ್ಲ ಪರದೇಶಿ ಎಷ್ಟು ಒಳ್ಳೇ ಮನುಷ್ಯ ನೀನಿದೀಯ ನೋಡು ಚಂದ್ರ, ಒಳ್ಳೇ ದರವೇಶಿ ಒಂದೊಂದು ದಿನ ಒಂದೊಂದು ವೇಷ ಎಲ್ಲೋ ಹುಣ್ಣಿಮೆ ಗಿಣ್ಣಿಮ್ಮೆಗೊಮ್ಮೆ ಬಿಟ್ಟರೆ ಒಂದೇ ಒಂದು ದಿನವೂ ಸಮಯಕ್ಕೆ ಸರಿಯಾಗಿ ಬಂದು ದಿನಪೂರ್ತಿ […]

#ಕವಿತೆ

ಕನಸು

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ ಆನಂದಿಸುವ ಕನಸನ್ನು ಚಿರುಗುಮೀಸೆಯ ಹುಡುಗ ಕಾಣದಿದ್ದರೆ, ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು, ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ ಹೋಲಿರಂಗು, ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ, ಕೂಸಿನ ಹಾಲು ನಗು, ಜೇನು ತೊದಲು, ಅವ್ವು-ಅಮ್ಮಿ ಇವನೆಲ್ಲ ಗರ್ಭಿಣಿಯು ಕನಸು ಕಾಣದಿದ್ದರೆ, ತನ್ನ ಮಗನ ನಿಲುವಂಗಿ-ಡಿಗ್ರಿ, […]

#ಇತರೆ

ಸಾಹಸ

0
ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)

ನೀವು ನೀರಿನಲ್ಲಿ ಹಾರಿಕೊಳ್ಳುತ್ತೀರಿ. ಆ ವಿಪುಲವಾದ ಜಲರಾಶಿಯು ನಮ್ಮನ್ನು ಹೆದರಿಸುವುದಿಲ್ಲ. ನೀವು ಕೈಕಾಲುಗಳನ್ನು ಬಡಿಯುತ್ತೀರಿ.  ಅದರೊಡನಯೇ ಈಸಕಲಿಸಿದೆ ನಿಮ್ಮ ಗುರುವಿಗೆ ಧನ್ಯವಾದಗಳನ್ನು ಅರ್ಪಿಸುತ್ತೀರಿ. ನೀವು ತೆರೆಗಳ ಮೇಲೆ ಅಧಿಕಾರವನ್ನು ನಡೆಸುತ್ತೀರಿ. ಹಾಗೂ ಬದುಕಿಕೊಂಡು ಹೊರೆಬೀಳುತ್ತೀರಿ. ನೀವು ವೀರರಾಗುತ್ತೀರಿ. ನೀವು ನಿದ್ರೆಹೋದಾಗ ‘ಬೆಂಕಿ ಬೆಂಕಿ’ ಎಂಬ ಮಾತು ಬೆಚ್ಚಿಬೀಳುವಂತೆ ಮಾಡಿತು. ನೀವು ಹಾಸಿಗೆಯೊಳಗಿಂದಲೇ ಕೂಗಿಕೊಳ್ಳುತ್ತೀರಿ. ಎದುರಿಗೆ ಬೆಂಕಿಯ […]

#ಕವಿತೆ

ಅದೇ ಯುಗಾದಿ

0
ದಲಿತ-ಬಂಡಾಯ ಚಳವಳಿಯ ಕಾಲದಿಂದಲೇ, ಬರವಣಿಗೆಯನ್ನು ಆರಂಭಿಸಿರುವ ಇವರು, ಸಾಕಷ್ಟು ಬರವಣಿಗೆಯನ್ನು ವಿವಿಧ ಪ್ರಾಕಾರಗಳಲ್ಲಿ ಮಾಡಿರುವಂಥವರು.ಇವರ ಕಥೆಗಳು ಕುತೂಹಲಕಾರಿ ಹಾಘೂ ಅಭ್ಯಾಸಪೂರ್ಣ ಯೋಗ್ಯವಾಗಿವೆ.ಒಂದು ವಿಶಿಷ್ಟ ಬಗೆಯ ಪ್ರಯೋಗಗಳನ್ನು - ಭಾಷಿಕ ಪ್ರಯತ್ನಗಳನ್ನು ಮಾಡುವುದರಿಂದ ಇವರ ಕಥೆಯೊಳಗೆ ಒಂದು ಚೈತನ್ಯಶೀಲತೆ ಮತ್ತು ಸಾಂಸ್ಕೃತಿಕ ಬಿಕ್ಕಟುಗಳ ಅನಾವರಣಗೊಳಿಸುವ ಗಂಭಿರ ಪ್ರಯತ್ನವನ್ನು ಕಾಣಬಹುದು.
ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)

ಅದೇ ಯುಗಾದಿ ಹಳೇ ಯುಗಾದಿ ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ! ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ ಇಳೆಗೆ ಕಳೆಯು, ಹೊಳೆವ ತೋರಣ ಕಣ್ಣಿಗೆ ಅದೇ ತುಂಬೆ, ಹೊಂಗೆ, ರಂಬೆ, ಕೊಂಬೆ ಚಿಗುರಿದೆ ಚಿಗರು ಹೂವು, ಕೋಗಿಲೆ ರಾಗದಿ, ನೋವಿದೆ ಯುಗಾದಿ ಸಾಲ, ಕಣ್ಣ […]

#ಕವಿತೆ

ಯುಗಾದಿ (೨)

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಒಂದೊಮ್ಮೆ, ಮಾವು ಬೇವುಗಳು ಚಿಗುರುವಾಗ ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು ಯುಗಾದಿ ಬರುತ್ತಿದೆ ಬೇವು ಬೆಲ್ಲ ತಿನ್ನುವ ಗತ್ತು ಹಸಿರು ತೋರಣ ಕಟ್ಟುವ ಹೊತ್ತೆಂದು. ಈಗ, ಝೆಕರಾಂಡಾ ಗುಲ್‌ಮೊಹರ್‌ಗಳ ಹೂ ಗೊಂಚಲುಗಳ ನೋಡಿ New Year is coming mom ಎನ್ನುತ್ತವೆ ನನ್ನ ಮಕ್ಕಳು Orange cake ಮಾಡೆನ್ನುವಂತೆ. ನಾನು, ನಾನು ಯುಗದ ಆದಿ ಯುಗಾದಿಯಲ್ಲಿದ್ದರೂ […]

#ಕವಿತೆ

ಪಯಣ

0
ಬೆಳಗೆರೆ ಜಾನಕಮ್ಮ
ಜನಕಜೆ
Latest posts by ಜನಕಜೆ (see all)

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚಣಕು ಸಾಗುತಿಹುದು ಈಗಲೋ ಆಗಲೋ ಸ್ತಬ್ಧವಹುದು ಸಾಹಸೀ, ಮಥನದಿಂ ಸವಿ ಮಧುವನು ದೊರೆತುದನು ಕಂಡವರಿಗುಣಿಸು ನೀನು ಜನಕಜೇ, ಮಿಂಚಿನೊಳು ಕಾಣು ಜೇನು *****

#ಕವಿತೆ

ಹೇಳದಿದ್ದರು ನೀನು

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ ಏಕೆ ವಿಧಿಗೆ ಈ ಬಗೆ ಜಿದ್ದು ಬೆಂದವರ ಬೆನ್ನಿಗೇ ಏಕೆ ಗುದ್ದು? ಬಾಗುವುದು ಏಗುವುದು ಸಹನೆಯಲಿ ಸಾಗುವುದು ಇಷ್ಟಕೇ ಮುಗಿಯಿತೇ […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೧೩

0

ಸಣ್ಣವರ ದಡ್ಡತನ, ದೊಡ್ಡವರ ಸಣ್ಣತನಕ್ಕಿಂತ ಮೇಲು! *****