ಒಂದೊಮ್ಮೆ,
ಮಾವು ಬೇವುಗಳು ಚಿಗುರುವಾಗ
ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು
ಯುಗಾದಿ ಬರುತ್ತಿದೆ
ಬೇವು ಬೆಲ್ಲ ತಿನ್ನುವ ಗತ್ತು
ಹಸಿರು ತೋರಣ ಕಟ್ಟುವ ಹೊತ್ತೆಂದು.

ಈಗ,
ಝೆಕರಾಂಡಾ ಗುಲ್‌ಮೊಹರ್‌ಗಳ
ಹೂ ಗೊಂಚಲುಗಳ ನೋಡಿ
New Year is coming mom
ಎನ್ನುತ್ತವೆ ನನ್ನ ಮಕ್ಕಳು
Orange cake ಮಾಡೆನ್ನುವಂತೆ.

ನಾನು,
ನಾನು ಯುಗದ ಆದಿ ಯುಗಾದಿಯಲ್ಲಿದ್ದರೂ
ಇವೆರಡರ ನಡುವೆ
ಯುಗಾಂತರದಲ್ಲಿದ್ದೇನೆಂದೇ ಅನಿಸುತಿದೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)