ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು ಎಲ್ಲಿದೆಯೆ ನಿನ್ನದೇ ನೆರಳು! ಹೊಲ...

ನೋಡುತ್ತ ಕನ್ನಡಿ ಬಿರುಕು ಬಿಟ್ಟು ಒಡೆದು ಚೂರಾಯ್ತು ದೃಷ್ಟಿ ತಾಗಿರಬೇಕು ಒಡೆದ ಚೂರುಗಳು ಚುಚ್ಚಿ ಅಂಗೈ ಅಳತೊಡಗಿತು ಕೆಂಪಗಿತ್ತೇ ಕಣ್ಣೀರು? ಒಂದು ನೂರಾದ ಬಿಂಬದಲಿ ಕಣ್ಣು ಮೂಗು ಮುಖ ಹರಿದು ಬಿಕ್ಕುತ್ತಿತ್ತು ಹೃದಯ ಬಹಳಷ್ಟು ದಿನ ಅದೇ ನೆನಪಲ್ಲಿ...

ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು? ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು? ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು? ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು? ಸಣ್ಣ ಗಿಡದಲು ಬಣ್ಣದ ಹೂಗಳು, ಹಸಿರೆಗೆ...

ಎಲ್‌ಐಸಿ ಹಣ, ವಿಸ್ಮಯ ಕೊಟ್ಟ ಹಣ ಎಲ್ಲಾ ಸೇರಿಸಿ ಬ್ಯಾಂಕಿಗೆ ಕಟ್ಟಿದರು. ಕೈಯಲ್ಲಿ ಎರಡು ಲಕ್ಷ ಖರ್ಚಿಗೆಂದು ಇಟ್ಟುಕೊಳ್ಳುವಂತೆ ದೊಡ್ಡಪ್ಪ ಹೇಳಿದ್ದರಿಂದ ಇಳಾ ತನ್ನದೊಂದು ಅಕೌಂಟ್‌ನ್ನು ಸಕಲೇಶಪುರದ ಬ್ಯಾಂಕಿನಲ್ಲಿ ತೆಗೆದು ಎರಡು ಲಕ್ಷ ಅಲ್ಲಿ ಇ...

ದೇವ ಕರುಣಿಸು ಜಯವ ನಾಡ ನಾಯಕಗೆ ಜೀವದಿಂದುಳುಹೆಮಗೆ ನಾಡ ಬಿಡುಗಡೆಗೆ. ಹಿಂಸೆಯನ್ನಡಗಿಸಲು, ಹಿಂಸಕರನೆದುರಿಸೆ, ಅ- ಹಿಂಸೆಯೆನ್ನುವ ಹಿರಿಯ ತತ್ವವನು ಸಾರಿ, ಧ್ವಂಸಕರ ಲೋಕದಲಿ ಶಾಂತಿ ಮೂಡಿಸೆ, ಪರಮ- ಹಂಸ ಸಂದೇಶವಾಚರಿಸುತಿಹ ಗಾಂಧಿಗೆ. (೬-೫-೧೯೪೪:...

ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ ತರಗತಿ ತುಂಬಾ ತೊಪ್ಪೆ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಮರದಿಂದ ಬಿದ್ದೂ ಬಾವಿಂದ ಎದ್ದೋ ಪುತ ಪುತ ಬಂದವು ಎಷ್ಟೊಂದ್ ಮುದ್ದೊ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಕೆಲವರು ಐಗಳು ಕಲವರು ಹೈಕಳು ಚಕ್ಕಳ ಮಕ್ಕ...

ಅಂತರಂಗದ ಭಾವ ಮಸಗಿರಲಿ ಅಡಗಿರಲಿ ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ! ನಾಟಕದ ರಂಗವಿದು: ಪಾತ್ರಗಳ ವಹಿಸುತಿರು ಶಾಂತಿಯಿಂ ನೀನೀಗ ಮೌನವನು ಅನುಸರಿಸು ಹೆದರದಿರು ಕುದಿಯದಿರು ಹೇಡಿ ನೀನಾಗದಿರು ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ ಸಿರಬ...

ಕವಿತೆಯೆಂದರೆ… ಪದ, ಹದ, ಮುದ, ಮಾತು ಮಾತಿಗೂ ಮಿಗಿಲು ಮುಗಿಲು. ನಿಗೂಢ ಬಯಲು ಬಟ್ಟ ಬಯಲು ಹೊಳೆ ಹೊಳೆವ ಶಿವನ ಅಲುಗು. ಕವಿತೆಯೆಂದರೆ… ಕಂಬಳದ ಕಸರತ್ತು ಅಮ್ಮನ ಕೈ ತುತ್ತು ಮಗುವಿನ ಮುತ್ತು ಮತ್ತು, ಗಮ್ಮತ್ತು ಶಬ್ದಗಳ ಕರಾಮತ್ತು ಉಸ...

ಚಂದ್ರ ನನಗೆ ನಿನ್ನ ಈ ಬುದ್ಧಿ ಮಾತ್ರ ಹಿಡಿಸೋದಿಲ್ಲ ನೋಡು ಈಗ ಒಂದೆಂಟತ್ತು ದಿನದ ಹಿಂದೆ ದಿಲ್ಲಿಯಲ್ಲಿ ಸಿಕ್ಕಿದಾಗ ಪ್ರಧಾನಮಂತ್ರಿ ನೋಡ್ಕೋಂಡು ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ ಮುಖ ಗುಂಡಗೆ ಅರಳಿ ಹೋಗಿತ್ತು. ಇವತ್ತು ನೋಡಿದರೆ ಚುನಾವಣೆಗೆ ...

1...1415161718...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...