ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ ಹೊಳೆಯುವ ...

ತಂಬಾಕಿನಿಂದ ಉತ್ಪಾದಿಸುವ ಯಾವುದೇ ಬೀಡಿ ಸಿಗರೇಟುಗಳನ್ನು ಎಷ್ಟೇ ಎಚ್ಚರಿಕೆಯಿಂದ ಕುಡಿದರೂ ಹೊಗೆ ಬಂದೇ ಬರುತ್ತದೆ. ಇದರಿಂದಾಗಿ ಪರಿಸರ ಮಾಲಿನ್ಯವಾಗುವುದರ ಜೊತೆಗೆ ಸಿಗರೇಟಿನ ವಾಸನೆಯಿಂದ ಹಲವು ಜನ ದೂರವಾಗುವುದೂ ನಡೆಯುತ್ತದೆ. “ಸಿಗರೇಟು-...

ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ? ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ? ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು ತಮಟೆ ಹೊಡೆದು ಸಾರುವೆ ದಿಟದ ಮಾತನು, ಲೋಕ ತಿಳ...

ಭಿಕ್ಷುಕ: “ಸ್ವಾಮೀ ಮೂರು ದಿನಗಳಿಂದ ಹೊಟ್ಟಿಗೆ ಆನ್ನವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದೀನಿ ಕೊಂಚ ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳಿ”. ಮನೆ ಯಜಮಾನ: “ಇನ್ನೂ ಮೂರು ದಿನ ಉಪವಾಸ ಇದ್ದುಬಿಡು ಮುಂದೆ ಆದೇ ಅಭ್ಯಾಸವಾಗಿ ಬಿಡುತ್ತೆ...

ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್. ಗೌರವಾನ್ವಿತ ಗ್ರಾಹಕರಾದ ನಿಮಗೆ ...

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳ...

ಒಬ್ಬ ವ್ಯಕ್ತಿ ತನ್ನ ಊರು ಬಿಟ್ಟು ಬೇರೆ ಊರಿಗೆ ಹೋಗಿ ಒಂದಷ್ಟು ದಿನಗಳು ಆ ಪ್ರದೇಶದಲ್ಲಿ ಇದ್ದು ಸುತ್ತಾಡಿಕೊಂಡು ಬರುವುದೇ ಪ್ರವಾಸ ಎನಿಸಿಕೊಳ್ಳುತ್ತದೆ. ಹಾಗಾದರೆ ಈ ‘ಪ್ರವಾಸ’ ಎನ್ನುವ ಶಬ್ದ ಹುಟ್ಟಿಕೊಂಡಿದ್ದೆಲ್ಲಿ ಎಂಬ ಪ್ರಶ್ನ...

ಕಲ್ಲಾಳದ ಜಲಪಾತ ಇನೂನ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರ...

ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿ...

ಹೇ ಸಖೀ ಬೃಂದಾವನ ಎಷ್ಟು ಚೆಂದವೇ! ತೆತ್ತು ಕೊಂಡಿತಲ್ಲ ಇದು ಹರಿಗೆ ತನ್ನನೇ ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು ತುಳಸಿವನಕೆ ತರುವಳು ನಿತ್ಯ ನೀರನು ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ ಹರಿನಾಮವ ಜಪಿಸುತಿಹಳು ಮಧುರ ದನಿಯಲಿ! ಕಾಮಧೇನು ಹಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....