ಸಹಕಾರ ನಮ್ಮ ಉಸಿರು ಸಹೋದರತೆ ನಮ್ಮ ಹಸಿರು ಸಮಬಾಳ್ವೆ ಮಂತ್ರವೆಮಗಿರಲಿ ದುಡಿದು… ದಣಿದ ಬಂಧುಗಳೇ ಬದುಕಲಿ ಬಳಲುತ ಬೆವರು ಸುರಿಸುವ ಬಾಂಧವರೆ ಕಾಯಕ ಕೈಲಾಸವೆಂಬ ಬಸವ ಘೋಷದಲಿರುವ ಅಗಾಧ ಶಕ್ತಿಯ ಅರಿವು ತಿಳಿಯಿರಿ ಸಹಕಾರ ತತ್ವದಡಿ ಬಸವಯುಗದಲಿ...

ನರರ ಕರ್ಮಕೆ ತಕ್ಕ ದಿನ ಬಂತು ರಮಣಿ ಅರಸರ ರಾಜ ಕ್ರಿಸ್ತಾನ ರಾಣಿ ||ಪ|| ಹದ್ದು ಮಾಂಸಕ ಬಂದು ಎರಗಿದ ತೆರದಿ ಗುದ್ಯಾಟ ನೋಡಿ ಕಾಳಗ ಮಹಿಮರದಿ ||೧|| ಮಾಡೋ ಶಿಶುನಾಳಧೀಶನ ಸ್ಮರಣಿ ಅಸಮ ಸದಗುರು ಬೋಧಾಮೃತ ಕರುಣಿ ||೨|| ****  ...

ಇಂದು ಏಕಾದಶಿ ವ್ರತವ ತೀರಿಸಿದೆ ಶ್ರೀ ಗುರುನಾಥನುಪದೇಶ ಬಲದಿಂದ ||ಪ|| ಹೊಂದಿದೆನು ದ್ವಿತೀಯ ಸಂಧ್ಯಾವಂದನೆಯ ಕಾಲದಲಿ ಬಂಧುರ ಬಯಲು ಬ್ರಹ್ಮಾನಂದದಲಿ ||೧|| ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ ನಿಟಾದ ವೃಂದಾವನವ ವಿವಾಹದ್ವ...

ಸಾಲೆಯ ನೋಡಿದಿಯಾ ಸರಕಾರದ ಸಾಲೆಯ ನೋಡಿದಿಯಾ ||ಪ|| ಸಾಲಿ ಸದ್ಗುರುವಿನ ಮಾಲು ಮಂಟಪವಿದು ಮೇಲೆ ಕಾಣಿಸುವದು ಭೂಲೋಕದಲ್ಲಿ ||ಅ.ಪ.|| ಕುಂಭ ಆರು ಮಧ್ಯದಿ ತುಂಬಿರುವ ಒಂಭತ್ತು ದ್ವಾರದಲಿ ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ ನಂಬಿಕೊಂಡು ನಿಜ ಅಕ್ಷರ ಕಲಿ...

ಕರೀಮ ಆ ಕತ್ತಲನ್ನು ಸೀಳಿಕೂಂಡು ಬಂದ. ಪೆಡಸುಪಡಸಾದ ಮೈ…. ಅಗಲಿಸಿದ ಕಣ್ಣುಗಳಲ್ಲಿ ದ್ವೇಷಾಗ್ನಿ. ಕೈಯಲ್ಲಿ ಹರಿತವಾದ ಕುಡಗೋಲು….”ಲೇಽಽ ಅಬಿದಾಲಿ. ಇವತ್ತ ನಿನ್ನ ಕತಲ್‍ರಾತ್ರಿ !” ಕತ್ತಲನ್ನು ಬೆಚ್ಚಿಬೀಳಿಸುವ ಆಸ್ಪೋ...

ಗುಡಗುಡಿಯನು ಸೇದಿನೋಡೋ ನಿನ್ನ ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ|| ಮನಸೆಂಬ ಚಂಚಿಯ ಬಿಚ್ಚಿ ದಿನ- ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ ||೧|| ಬುರುಡಿಯೆಂಬುವದು ಶರೀರ...

ಅಣ್ಣ ಶುಚಿಯಾಗಿರಬೇಕೊ ನೀನು ಲಕಲಕ ಅನಬೇಕೋ || ದಿನವೂ ಸ್ನಾನವ ಮಾಡಬೇಕು ಶುಭ್ರ ಬಟ್ಟೆಯ ಧರಿಸಬೇಕು ಕೂದಲ ಬಾಚಿ ನೀಟಿರಬೇಕು ನಡೆವ ಕಾಲಿಗೆ ಚಪ್ಪಲಿ ಬೇಕು || ವಾರದಲೊಮ್ಮೆ ಉಗುರ ಕಟಾವು ಆಗಾಗ ಶುದ್ಧಿ ಕಣ್ಣಿನ ತಾವು ಬೆರಳ ತಿರುವದಿರು ಮೂಗಿಗೆ ಬೆಳ...

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ – `ಮನ’ವ ಕೈಯ ಹಿಡಿಯಲಿ || ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ ತಾನದು ಹೊನ್ನ ದೀವಿಗೆ ಮರವೆ ತಾರದೆ ಜೊ...

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ||ಪ|| ಆಗದಾಗದು ಗಾಂಜಿ ಹೋಗಿ ಬಹು ಸುಖವು ಯೋಗಿ ಜನರು ಕಂಡು ಮೂಗು ಮುಚ್ಚಿಕೊಳ್ಳುವ ||೧|| ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್ ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು ಅರಿಯದ ನರಗುರಿಗಳದು ಕೇಳದೆ ಬರಿದೆ ವಿಚಾರಿಸ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...