ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರ‌ಒಳಗೆಲ್ಲಾ ಶ್...

ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ.  ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ...

ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ ||ಪ|| ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ ||೧|| ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು ಆಣೆ ಹಾಕಿದೆ ಸೈ ಸೇರಿ ಜರಿದಾಡಿ ||೨|| ಉತ್ತರ ದಿಕ್ಕಿನಿಂದ ದು...

ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ ಮತಿಗೀತ ಸ್ತುತಿ-ನಿಂದೆ...

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ ಅಸ್ವಾಭಾವಿಕ ವರ್ತನೆಗಳಿಂದ. ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ; ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು. ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ ಹೊಸ ಹಸಿರನ್ನೇನೊ ಹೊದ್ದು...

ಛೇ ಇದು ಸೂಳಿಗಾರಿಕೆ ಛೇ ಇದು ಸೂಳಿಗಾರಿಕೆ ||ಪ|| ಬಾಯೆನುತಲಿ ನೀ ಕರೆದರೆ ಬರಲೋಣ ನ್ಯಾಯ ಬೆಳಸಿ ನಿಮಗ್ಹೇಳುವದಿದು ||೧|| ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು ||೨|| ಚಿತ್ತಗಡಕಿ ಎನ್ನ ಜತ್ತಿನವರ ಕೈ ಕತ್ತಿ ...

ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ: ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗ...

ಬಿಡು ಬಿಡು ನಿಮ್ಮಯ ಈ ನಡತಿ ಛೇ ಸಲ್ಲದು ಈ ರೀತಿ ||ಪ|| ಪೊಡವಿಯೊಳಗೆ ನಮ್ಮ ಗೊಡವಿಯಾತಕೆ ನಿಮಗೆ ನುಡಿಯದೊಂದನು ನೀನು ನಡಿನಡಿಮನೆಗೆ ||೧|| ಭೋಗವಿಷಯಸುಖ ನೀಗಿ ಯೋಗದೊಳಗೆ ಆಗದಾಗದು ಸ್ನೇಹ ನಡಿ ನಮಗೀಗ ||೨|| ಧರೆಯೊಳು ಶಿಶುನಾಳಧೀಶನು ಕಂಡರೆ ಮರು...

ಸೋರುತಿಹುದು ಮನೆಯಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯಮಾಳಿಗಿ ||ಪ|| ಸೋರುತಿಹುದು ಮನೆಯಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ ಕಾಳಕತ್ತಲೆಯೊಳಗೆ ನಾನು ಮೇಲಕೇರಿ ಮೆಟ್ಟಲಾರೆ ||೧|| ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರಕು...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...